Home ಧಾರ್ಮಿಕ ಸುದ್ದಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ಅಮ್ಮನವರ ಪುನರ್‌ ಪ್ರತಿಷ್ಠೆ: ಧಾರ್ಮಿಕ ಸಭೆ

ಶ್ರೀ ದುರ್ಗಾಪರಮೇಶ್ವರಿ, ಶ್ರೀ ಅಮ್ಮನವರ ಪುನರ್‌ ಪ್ರತಿಷ್ಠೆ: ಧಾರ್ಮಿಕ ಸಭೆ

ಶ್ರದ್ಧೆ , ಆತ್ಮವಿಶ್ವಾಸದಿಂದ ದೇವರ ಸೇವೆ ಮಾಡಿ: ಬಾಳೆಕುದ್ರು ಶ್ರೀ

1635
0
SHARE

ಕುಂದಾಪುರ: ಭಕ್ತಿಯಿಂದ ಭಗವಂತನ ಸೇವೆ, ಉಪಾಸನೆ ಮಾಡಿದರೆ ಭಗವಂತ ಒಲಿಯುತ್ತಾನೆ. ದೇವರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಇಟ್ಟುಕೊಂಡು ದೇವರ ಸೇವೆ ಮಾಡಬೇಕು. ಸ್ವಾರ್ಥ, ಫ‌ಲಾಪೇಕ್ಷೆಯನ್ನು ಇಟ್ಟುಕೊಂಡು ಯಾವುದೇ ಕಾರ್ಯ ಮಾಡಬಾರದು. ಮನುಷ್ಯನು ಸ್ವಂತ ಮತ್ತು ಪರಮಾರ್ಥವನ್ನು ಬಿಟ್ಟರೆ ಮನುಷ್ಯತ್ವದಿಂದ ದೇವತ್ವದ ಕಡೆಗೆ ಹೋಗಲು ಸಾಧ್ಯವಾಗುತ್ತದೆ ಎಂದು ಬಾಳೆಕುದ್ರು ಶ್ರೀ ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು.

ಗಂಗೊಳ್ಳಿಯ ದಾಕುಹಿತ್ಲು ಶ್ರೀ ದುರ್ಗಾಪರಮೇಶ್ವರಿ ಶ್ರೀ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಪರಿವಾರ, ಶ್ರೀ ದುರ್ಗಾಪರಮೇಶ್ವರಿ ಮತ್ತು ಶ್ರೀ ಅಮ್ಮನವರ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕುಂದಾಪುರ ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಖಂಡ ಚಿಕ್ಕಯ್ಯ ಪೂಜಾರಿ, ಮುಂಬಯಿ ಉದ್ಯಮಿ ರವಿ ಟಿ. ನಾಯ್ಕ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಹೂವ ಖಾರ್ವಿ, ಶ್ರೀ ದುರ್ಗಾಪರಮೇಶ್ವರಿ ಶ್ರೀ ಅಮ್ಮನವರ ಭಜನ ಮಂಡಳಿ ಅಧ್ಯಕ್ಷ ಶಿವಂ ಪಾಂಡುರಂಗ ಖಾರ್ವಿ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರವೀಂದ್ರ ಖಾರ್ವಿ, ಬಿ. ಸಂಜೀವ ಖಾರ್ವಿ, ಮಹಿಳಾ ಮಂಡಳಿ ಉಪಾಧ್ಯಕ್ಷೆ ಶಾಂತಿ ಖಾರ್ವಿ ಉಪಸ್ಥಿತರಿದ್ದರು.

ಇದೇ ಸಂದರ್ಭ ರವೀಂದ್ರ ಖಾರ್ವಿ ಮತ್ತು ಸಂಜೀವ ಖಾರ್ವಿ ಅವರನ್ನು ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿ. ಸುರೇಂದ್ರ ಖಾರ್ವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಂದರ ಜಿ. ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಕೆ. ಶೀನ ಖಾರ್ವಿ ವಂದಿಸಿದರು.

ಶ್ರೀ ಪರಿವಾರ, ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಅಮ್ಮನವರ ಪುನರ್‌ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಪ್ರತಿಷ್ಠಾ ಹೋಮ, ಶ್ರೀ ದೇವರ ಪುನರ್‌ ಪ್ರತಿಷ್ಠೆ, ಬ್ರಹ್ಮಕಲಶ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜಿ.ಲಕ್ಷ್ಮೀನಾರಾಯಣ ಭಟ್‌ ಗಂಗೊಳ್ಳಿ ಅವರ ಪೌರೋಹಿತ್ಯದಲ್ಲಿ ಹಾಗೂ ಪ್ರವೀಣ ತಂತ್ರಿ ಉದ್ಯಾವರ ಇವರ ನೇತೃತ್ವದಲ್ಲಿ ಜರಗಿದವು.

LEAVE A REPLY

Please enter your comment!
Please enter your name here