Home ಧಾರ್ಮಿಕ ಸುದ್ದಿ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದ ಶ್ರಾವಕ-ಶ್ರಾವಿಕೆಯರು

ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದ ಶ್ರಾವಕ-ಶ್ರಾವಿಕೆಯರು

428
0
SHARE

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕದ 2ನೇ ದಿನದ ಅಭಿಷೇಕವು ರವಿವಾರ ನಡೆದಿದ್ದು, ರಜಾದಿನವಾದ ಕಾರಣ ಸಹಸ್ರಾರು ಸಂಖ್ಯೆ ಯಲ್ಲಿ ಭಕ್ತರು ಮಹಾ ಮಜ್ಜನದಲ್ಲಿ ಪಾಲ್ಗೊಂಡರು. ಮಸ್ತಕಾ ಭಿಷೇಕ ವೀಕ್ಷಣೆಗಾಗಿ ರೂಪಿಸಲಾಗಿದ್ದ ಧರ್ಮದರ್ಶನದಲ್ಲೂ ಸಾವಿರಾರು ಭಕ್ತರು ಅಭಿಷೇಕವನ್ನು ವೀಕ್ಷಿಸಿದರು.

ಬೆಳಗ್ಗೆ 8.30ಕ್ಕೆ ಆರಂಭಗೊಂಡ ಅಭಿಷೇಕ ಕಾರ್ಯ 2.30ರ ವರೆಗೂ ಸಾಗಿದ್ದು, ಶ್ರಾವಕ-ಶ್ರಾವಿಕೆಯರು ಶಾಂತಚಿತ್ತರಾಗಿ ಅಭಿಷೇಕ ಕಾರ್ಯದಲ್ಲಿ ಭಾಗಿಗಳಾಗುವುದರ ಜತೆಗೆ ಕಣ್ತುಂಬಿ
ಕೊಂಡರು. ಜನಸಾಗರವೇ ಹರಿದು ಬಂದರೂ ಕಿಂಚಿತ್ತೂ ತೊಂದರೆಯಾಗದ ರೀತಿಯಲ್ಲಿ ಸ್ವಯಂಸೇವಕರು ಶ್ರಮಿಸಿದರು.

ಪುಷ್ಪಾಲಂಕೃತ ಪೀಠ ಪುಷ್ಪಾಲಂಕೃತ ಮನ್ಮಥನ ಪೀಠವು ಮನಸೂರೆ ಗೊಂಡಿತು. ರಾಜ್ಯ, ಹೊರರಾಜ್ಯಗಳ 14ಕ್ಕೂ ಹೆಚ್ಚಿನ ಭಟ್ಟಾರಕ ಮಹಾಸ್ವಾಮೀಜಿಯರು ಮಜ್ಜನ ಕಾರ್ಯದಲ್ಲಿ ಪಾಲ್ಗೊಂಡರು. ಕ್ಷೇತ್ರಕ್ಕೆ ಭೇಟಿ ನೀಡಿದ ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ಅವರನ್ನು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಗೌರವಿಸಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮೊದಲದವರು ಉಪಸ್ಥಿತರಿದ್ದರು. ಬಾಯಾರಿಕೆಗೆ ಮಜ್ಜಿಗೆ ರುಚಿ ರತ್ನ ಗಿರಿ ಬೆಟ್ಟದಲ್ಲಿ ಮಧ್ಯಾಹ್ನದ ಸೆಕೆಯಿಂದ ಬಳಲಿದ ಭಕ್ತರು ಜೀರಿಗೆ ಮಜ್ಜಿಗೆ ಕುಡಿದು ತಮ್ಮ ಬಾಯಾರಿಕೆ ನಿವಾರಿಸಿಕೊಂಡರು.

ರವಿವಾರ ಹೆಚ್ಚಿನ ಜನ ಸೇರಿದ್ದ ಪರಿಣಾಮ ಮಜ್ಜಿಗೆಗೆ ವಿಶೇಷ ಬೇಡಿಕೆ ಇತ್ತು. ಅಲ್ಲಲ್ಲಿ ಇಡಲಾಗಿದ್ದ ಮಜ್ಜಿಗೆ ಸ್ಟಾಲ್‌ಗ‌ಳಿಗೆ ಸ್ವಯಂಸೇವಕರು ಮಜ್ಜಿಗೆ ಸಾಗಿಸಲು ಶ್ರಮಿಸಿದರು.
ಉಚಿತ ಮಜ್ಜಿಗೆ ನೀಡಿದ್ದಕ್ಕಾಗಿ ಮಂಗಳೂರು ಹಾಲು ಒಕ್ಕೂಟಕ್ಕೆ ಕೃತಜ್ಞತೆ ಸಲ್ಲಿಸುವ ವೇಳೆ ಚಪ್ಪಾಳೆಯ ಸದ್ದು ಜೋರಾಗಿಯೇ ಕೇಳಿಬಂತು.

1008 ಕಲಶಗಳ ಅಭಿಷೇಕ

ಅಭಿಷೇಕ ಕಾರ್ಯ ಅಂತಿಮಗೊಳ್ಳು ತ್ತಿದ್ದಂತೆ ಶ್ರಾವಕ – ಶ್ರಾವಿಕೆಯರು ಕುಣಿದಾಡಿ ಸಂಭ್ರಮಿಸಿದರು. ಎಲ್ಲರಿಗೂ ಬೆಟ್ಟಕ್ಕೆ ತೆರಳಲು ಉಚಿತ ವಾಹನದ ವ್ಯವಸ್ಥೆ ಮಾಡಲಾಗಿತ್ತು. 1008 ಕಲಶಗಳ ಅಭಿಷೇಕಕ್ಕಾಗಿ ಜನತೆ ಸರತಿ ಸಾಲಿನಲ್ಲಿ ನಿಂತಿದ್ದು, ಬಳಿಕ ವಿವಿಧ ದ್ರವ್ಯಾಭಿಷೇಕದ ಸೇವಾರ್ಥಿಗಳಿಂದ ಅಭಿಷೇಕ ಕಾರ್ಯ ನಡೆಯಿತು.

LEAVE A REPLY

Please enter your comment!
Please enter your name here