Home Uncategorized ನೇಮ ಆಚರಣೆಯಲ್ಲಿ ಶ್ರದ್ಧಾಭಕ್ತಿ ಮುಖ್ಯ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ನೇಮ ಆಚರಣೆಯಲ್ಲಿ ಶ್ರದ್ಧಾಭಕ್ತಿ ಮುಖ್ಯ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

1726
0
SHARE

ವೇಣೂರು : ನಾವು ಇಂದು ಲೌಕಿಕ ಸುಖಕ್ಕಾಗಿ ಹಾತೊರಿಯುತ್ತಿದ್ದೇವೆ. ಆದರೆ ನಿಜವಾದ ಸುಖ ಆಧ್ಯಾತ್ಮದಲ್ಲಿದೆ. ಧಾರ್ಮಿಕ ಆಚರಣೆಗಳಲ್ಲಿ ಆಡಂಬರ ಸಲ್ಲದು. ದೈವಗಳ ನೇಮಗಳ ಆಚರಣೆಗೆ ಆರಾಧನ ಕ್ರಮಕ್ಕಿಂತ ಶ್ರದ್ಧಾಭಕ್ತಿ ಮುಖ್ಯ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಪಡಂಗಡಿ ಪೊಯೆಗುಡ್ಡೆಯ ಶ್ರೀ ಸತ್ಯಸಾರಮಾನಿ ಕ್ಷೇತ್ರದಲ್ಲಿ ಶ್ರೀ ಸತ್ಯಸಾರಮಾನಿ, ಧರ್ಮದೆ„ವ ಅಲೇರ ಪಂಜುರ್ಲಿ ಹಾಗೂ ಚಾಮುಂಡಿ-ಗುಳಿಗ ದೈವಗಳ 3ನೇ ವರ್ಷದ ನೇಮ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾರಮಾನಿ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಅಣ್ಣು ಗುತ್ತಿಗುಡ್ಡೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಮಾಜ ಪರಿವರ್ತನ ಚಳವಳಿಯ ಮುಖಂಡ ಪಿ. ಡೀಕಯ್ಯ, ಪಣಂಬೂರು ಎನ್‌ಎಂಪಿ ಎಸ್‌ಸಿ, ಎಸ್‌ಟಿ ನೌಕರರ ಕಲ್ಯಾಣ ಸಂಘದ ಕಾರ್ಯಾಧ್ಯಕ್ಷ ಕಾಂತಪ್ಪ, ಮಂಗಳೂರು ಉತ್ತರ ಅಕ್ರಮ-ಸಕ್ರಮ ಸಮಿತಿ ಸದಸ್ಯ ಹರಿಯಪ್ಪ ಮುತ್ತೂರು, ಪಡ್ತಿರೆ ಗರ್ಡಾಡಿಯ ಸತ್ಯಸಾರಾಮುಪ್ಪಣ್ಣ ದೈವಸ್ಥಾನ ಸಮಿತಿಯ ಅಧ್ಯಕ್ಷ ತನಿಯಪ್ಪ ಹಚ್ಚಾಡಿ, ಬಂಟ್ವಾಳದ ಮೈರನ್‌ಪಾದೆಯ ಶ್ರೀರಾಮ ಭಜನ ಮಂದಿರ ಅಧ್ಯಕ್ಷ ಶಿವಕುಮಾರ್‌, ಸ್ಟೇಟ್‌ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್‌ ಅಮ್ಮು ಕುಮಾರ್‌, ಪೊಯೆಗುಡ್ಡೆ ಅಯ್ಯಪ್ಪ
ಭಜನ ಮಂದಿರದ ಅಧ್ಯಕ್ಷ ಸುರೇಶ್‌ ಪೂಜಾರಿ, ಜೋತಿಷಿ ವಿಟuಲ ಗರ್ಡಾಡಿ, ಮೂಡುಕೋಡಿ ಸತ್ಯಸಾರಮಾನಿ ದೈವಸ್ಥಾನ ಸಮಿತಿಯ ಅಧ್ಯಕ್ಷ ಆನಂದ, ಪೊಯ್ಯಗುಡ್ಡೆ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಶಂಕರ ಬಸ್ತಿಪಲ್ಕೆ, ಕಾರ್ಯದರ್ಶಿ ರಮೇಶ್‌ ಪಿ., ಕೋಶಾಧಿಕಾರಿ ಶಿವಾನಂದ ಬಸ್ತಿಪಲ್ಕೆ, ಗೌರವ ಸಲಹೆಗಾರ ದೂಜ ಬಸ್ತಿಪಲ್ಕೆ, ಜತೆ ಕಾರ್ಯದರ್ಶಿ ರಾಮು ಬಸ್ತಿಪಲ್ಕೆ, ಪ್ರಧಾನ ಅರ್ಚಕ ಬಪ್ಪಯ್ಯ
ಬೀಡು, ಶೀನ ಎರ್ಮಳ, ಶೇಖರ ಪೊಯೆಗುಡ್ಡೆ, ಬಾಬು ಪಡ್ತಿರೆ, ರಾಜು ಕಪ್ಪಲೊಟ್ಟು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ಮಾಲಾಡಿ ಗ್ರಾ.ಪಂ. ಅಧ್ಯಕ್ಷ ಬೇಬಿ ಸುವರ್ಣ, ಬಿಎಸ್‌ಪಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಂಜೀವ ಆರ್‌. ಉಪಸ್ಥಿತರಿದ್ದರು. ಪಡಂಗಡಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಷೇತ್ರದ ವತಿಯಿಂದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ಸ್ವಾಮೀಜಿ ವಿತರಿಸಿದರು.  ಕ್ಷೇತ್ರದ ಗೌರವ ಸಲಹೆಗಾರ ಪಿ.ಕೆ. ರಾಜು ಪಡಂಗಡಿ ಸ್ವಾಗತಿಸಿ, ಕಾರ್ಯದರ್ಶಿ ರಮೇಶ್‌ ಪಿ. ವಂದಿಸಿದರು.  ರಾಜೀವ್‌ ನಿರೂಪಿಸಿದರು. ಬಳಿಕ ರಾತ್ರಿ ಸತ್ಯಸಾರಮಾನಿ ದೈವಗಳ ದರ್ಶನ ಸೇವೆ, ಚಾಮುಂಡಿ ಗುಳಿಗ, ಧರ್ಮದೈವ ಅಲೇರ ಪಂಜುರ್ಲಿ ದೈವಗಳ ನೇಮ ಜರಗಿತು.

ಸಾಂಪ್ರದಾಯಗಳನ್ನು ರಕ್ಷಿಸೋಣ
ಅವಿದ್ಯಾವಂತರಾಗಿದ್ದ ಪೂರ್ವಜರು ಯಾವುದೇ ಮಂತ್ರಗಳನ್ನು, ಆರಾಧನ ಕ್ರಮವನ್ನು ತಿಳಿದವರಲ್ಲ, ಆದರೆ ಭಕ್ತಿ-ಶ್ರದ್ಧೆಯಿಂದ ತಮ್ಮದೇ ರೀತಿಯಲ್ಲಿ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದು, ದೈವಗಳು ಅವರ ಬೆಂಗಾವಲಾಗಿ ಅನುಗ್ರಹವನ್ನು ನೀಡುತ್ತಾ ಬಂದಿದೆ. ಆದ್ದರಿಂದ ಪೂರ್ವಜರ ಆಚರಣೆಯಲ್ಲಿ ಯಾವುದೇ ಬದಲಾವಣೆ ಬೇಡ, ಇದೇ ಕ್ರಮವನ್ನು ಎಲ್ಲರೂ ಮುಂದುವರಿಸಿಕೊಂಡು ನಮ್ಮ ಆಚರಣೆ, ಸಾಂಪ್ರದಾಯವನ್ನು ರಕ್ಷಿಸುವ ಕೆಲಸ ಮಾಡಬೇಕು.
– ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಸದ್ಗುರು

LEAVE A REPLY

Please enter your comment!
Please enter your name here