Home ಧಾರ್ಮಿಕ ಸುದ್ದಿ ಕರಾವಳಿಯಲ್ಲಿ ಶ್ರದ್ಧಾ ಭಕ್ತಿಯ ಶಿವರಾತ್ರಿ ಆಚರಣೆ

ಕರಾವಳಿಯಲ್ಲಿ ಶ್ರದ್ಧಾ ಭಕ್ತಿಯ ಶಿವರಾತ್ರಿ ಆಚರಣೆ

792
0
SHARE
ಮಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ಕುದ್ರೋಳಿ ಕ್ಷೇತ್ರದಲ್ಲಿ ರಥೋತ್ಸವ ನಡೆಯಿತು.

ಮಂಗಳೂರು/ಉಡುಪಿ: ಉಭಯ ಜಿಲ್ಲೆಗಳ ವಿವಿಧ ಶಿವ ದೇವಸ್ಥಾನಗಳಲ್ಲಿ ಮಹಾ ಶಿವರಾತ್ರಿಯನ್ನು ಶುಕ್ರವಾರ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ದೇವರಿಗೆ ವಿವಿಧ ಅಭಿಷೇಕ, ಪೂಜೆ ನೆರವೇರಿತು. ದೇಗುಲದ ಮೇಲ್ಭಾಗ ದಲ್ಲಿರುವ ಶಿವಲಿಂಗಕ್ಕೆ ಸಹಸ್ರಾರು ಭಕ್ತಾದಿಗಳು ಅಭಿಷೇಕ ನೆರವೇರಿ ಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶರವು ಶ್ರೀ ಮಹಾಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ವಿಶೇಷ ಪೂಜೆ ಜರಗಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ದೇವಿಗೆ ಅರ್ಧನಾರೀಶ್ವರ ಅಲಂಕಾರ ಮಾಡಲಾಯಿತು.

ವಿವಿಧೆಡೆ ಆಚರಣೆ, ಜಾಗರಣೆ
ಉಡುಪಿ: ಜಿಲ್ಲೆಯ ವಿವಿಧ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ರಥೋತ್ಸವ, ಭಜನೆ, ಜಾಗರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಉಡುಪಿಯ ಶ್ರೀಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನ ದಲ್ಲಿ ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶ ಪ್ರಿಯ ತೀರ್ಥ ಶ್ರೀಪಾದರು, ಆಡಳಿತೆದಾರ ಶ್ರೀ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಶ್ರೀ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾ ಸಾಗರತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವದ ಧ್ವಜಾರೋಹಣ ನಡೆಯಿತು.

ಬನ್ನಂಜೆ, ಪರ್ಕಳ, ಕಟಪಾಡಿಯ ವಿಶ್ವನಾಥ ಕ್ಷೇತ್ರ, ಬಾರಕೂರು ಪಂಚ ಲಿಂ ಗೇಶ್ವರ ಮುಂತಾದ ದೇವಸ್ಥಾನ ಗಳಲ್ಲಿ ವಿಶೇಷ ಪೂಜೆ, ರುದ್ರ ಪಾರಾಯಣ ನಡೆದವು. ವಿವಿಧೆಡೆ ಗಳಲ್ಲಿ ಭಕ್ತರು ಎಳ್ಳೆಣ್ಣೆ ಸಮರ್ಪಿಸಿ, ರುದ್ರಾಭಿಷೇಕ, ಹಣ್ಣುಕಾಯಿ ಗಳ ಸೇವೆ ನಡೆಸಿದರು. ಹಲವೆಡೆ ಶುಕ್ರವಾರ ರಥೋತ್ಸವಗಳು ನಡೆದಿದ್ದು, ಹಲವೆಡೆ ಶನಿವಾರ ರಥೋತ್ಸವ ನಡೆಯಲಿವೆ. ಕೆಲವು ದೇವಸ್ಥಾನ ಗಳಲ್ಲಿ ಶನಿವಾರ ಅನ್ನಸಂತರ್ಪಣೆ ನಡೆಯಲಿದೆ. ಕೆಲವು ದೇವಸ್ಥಾನಗಳಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮ ಜರಗಿತು.

ಲಿಂಗ ಮುಟ್ಟಿ ಪೂಜಿಸಿದ ಭಕ್ತರು
ಬೈಂದೂರು ಒಣಕೊಡ್ಲು ಶಿವ ದೇವಸ್ಥಾನದಲ್ಲಿ ಭಕ್ತರು ಶಿವರಾತ್ರಿ ದಿನ ಮಾತ್ರ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಸಂಪ್ರದಾಯದಂತೆ ಶುಕ್ರವಾರ ಅಸಂಖ್ಯ ಭಕ್ತರು ಮುಟ್ಟಿ ಪೂಜಿಸಿದರು.

LEAVE A REPLY

Please enter your comment!
Please enter your name here