ಮಹಾನಗರ: ವಾಮಂಜೂರು ಮೂಡು ಶೆಡ್ಡೆಯಲ್ಲಿ ಶ್ರೀರಾಮ ಸೇನೆಯ ವತಿಯಿಂದ ಶಿವಾಜಿ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ದೇಶದ ಪರಿಸ್ಥಿತಿಯನ್ನು ಗಮನಿಸಿದರೆ ಉಗ್ರರ ಭಯೋತ್ಪಾದನೆಕ್ಕಿಂತ ದೇಶದ ಆಂತರಿಕ ಭಯೋತ್ಪಾದನೆಯೇ ಹೆಚ್ಚಾಗಿದ್ದು, ನಮ್ಮ ದೇಶದ ಅನ್ನ ತಿಂದು, ಋಣ ತೀರಿಸುವ ಬದಲು, ದೇಶ ದ್ರೋಹದ ಕೆಲಸ ಮಾಡುವಂತಹ ಮತಾಂಧರನ್ನು ಮಟ್ಟ ಹಾಕಲು ಪ್ರತಿ ಗ್ರಾಮದಲ್ಲಿ ಓರ್ವ ಶಿವಾಜಿ ಹುಟ್ಟಬೇಕಾಗಿದೆ ಎಂದರು.
ಸೈನಿಕರ ವೀರಮರಣ ಅತ್ಯಂತ ನೋವು ತಂದಿದ್ದು, ದೇಶ ಕೈಗೊಳ್ಳುವ ಯಾವುದೇ ನಿರ್ಧಾರಗಳಿಗೆ ಬೆಂಬಲ ಸೂಚಿಸುವ ಸಮಯವಿದು. ಇಲ್ಲವಾದಲ್ಲಿ ಖಂಡಿತವಾಗಿಯೂ ನಮಗೆ ಉಳಿಗಾಲವಿಲ್ಲ ಎಂದು ತಿಳಿಸಿದರು.
ಮೊದಲು ಭಜನೆ ಏರ್ಪಡಿಸಲಾಗಿತ್ತು. ಅನಂತರ ಘೋಷಣೆಯ ಮೂಲಕ ವಿಶೇಷ ಆರತಿ ಕಾರ್ಯಕ್ರಮ ಜರಗಿತು. ಹಿರಿಯ ಮುಖಂಡ ಜಯರಾಮ್ ಕೊಟ್ಟಾರಿಯವರು ಸತ್ಸಂಗ ನಡೆಸಿಕೊಟ್ಟರು. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ತಾಲೂಕು ಪಂಚಾಯತ್ ಸದಸ್ಯೆ ಕವಿತಾ ದಿನೇಶ್, ಕಿಶೋರ್ ನೀರುಮಾರ್ಗ, ರವಿ ನೀರುಮಾರ್ಗ ಉಪಸ್ಥಿತರಿದ್ದರು.