ಶಿರ್ವ : ವಿಶ್ವ ಹಿಂದೂ ಪರಿಷದ್, ಬಜರಂಗ ದಳ ಮತ್ತು ಮಾತೃಶಕ್ತಿ ಮಟ್ಟಾರು ಘಟಕದ ನೇತೃತ್ವದಲ್ಲಿ ಮಟ್ಟಾರು ಗಣೇಶೋತ್ಸವ ವೇದಿಕೆಯ ಬಳಿ ಸಪ್ತಮ ವರ್ಷದ ಸಾರ್ವಜನಿಕ ಗೋಪೂಜೆ ಸೋಮವಾರ ಸಂಪನ್ನಗೊಂಡಿತು.
ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾಧ್ಯಕ್ಷ ಪ್ರಮೋದ್ ಮಂದಾರ್ತಿ ಕಾರ್ಯ ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘಟನೆ ಸಾಮಾಜಿಕ ಕಳಕಳಿ ಯೊಂದಿಗೆ ಭಾರತೀಯ ಪರಂಪರೆ ಉಳಿಸಿ ಬೆಳೆಸುವ ಸಲುವಾಗಿ ಗೋವಿನ ಆರಾಧನೆಗೂ ಮಹತ್ವ ನೀಡುತ್ತಿದ್ದು ಗ್ರಾಮದಲ್ಲಿ ಧಾರ್ಮಿಕ ಭಾವನೆ ಮೂಡಲು ಸಹಕಾರಿ ಎಂದರು.
ಮುಖ್ಯ ಅತಿಥಿ ಸಮಾಜ ಸೇವಕ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿದರು. ಶಿರ್ವ ಗ್ರಾ.ಪಂ.
ಅಧ್ಯಕ್ಷೆ ವಾರಿಜಾ ಪೂಜಾರ್ತಿ, ವಿಶ್ವ ಹಿಂದೂ ಪರಿಷದ್ ಉಡುಪಿ ಜಿಲ್ಲಾ ಗೋರಕ್ಷಾ ಪ್ರಮುಖ್ ಉಮೇಶ್ ನಾಯ್ಕ, ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಬಜರಂಗ ದಳ ಶಿರ್ವ ವಲಯ ಸಂಚಾಲಕ ಪ್ರಕಾಶ್ ಕೋಟ್ಯಾನ್, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಬೆಳಂಜಾಲೆ, ವಿಹಿಂಪ, ಬಜರಂಗ ದಳ ಮಟ್ಟಾರು ಘಟಕದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಸಂಚಾಲಕ ರಮೇಶ್ ಶೆಟ್ಟಿ, ಗೋರಕ್ಷಾ ಪ್ರಮುಖ್ ಅಭಿಜಿತ್ ಪೂಜಾರಿ ಉಪಸ್ಥಿತರಿದ್ದರು.
ವಿಹಿಂಪ, ಬಜರಂಗ ದಳ ಮಟ್ಟಾರು ಘಟಕದ ಗೌರವಾಧ್ಯಕ್ಷ ವೇ|ಮೂ| ಪ್ರಸನ್ನ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೀಪಾವಳಿಹಬ್ಬದ ಗೋಪೂಜೆ ಉತ್ಸವದ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾಣಿಬೆಟ್ಟು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ಅವರಿಂದ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ ನೆರವೇರಿತು.ಶ್ರೀಕಾಂತ್ ಆಚಾರ್ಯ ಸ್ವಾಗತಿಸಿದರು. ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.