Home ಧಾರ್ಮಿಕ ಸುದ್ದಿ ಸಿದ್ಧಿ ವಿನಾಯಕ ದೇವರ ಶೋಭಾಯಾತ್ರೆಗೆ ಪುತ್ತಿಗೆ ಶ್ರೀಗಳಿಂದ ಚಾಲನೆ

ಸಿದ್ಧಿ ವಿನಾಯಕ ದೇವರ ಶೋಭಾಯಾತ್ರೆಗೆ ಪುತ್ತಿಗೆ ಶ್ರೀಗಳಿಂದ ಚಾಲನೆ

ಕುತ್ಯಾರು ಸಹಸ್ರಮಾನ ನವಕುಂಡ ಮಹಾಯಾಗ

192
0
SHARE

ಶಿರ್ವ : ಕುತ್ಯಾರು ಯಾಗ ಸಂಘಟನಾ ಸಮಿತಿಯ ಆಶ್ರಯದಲ್ಲಿ ಕುತ್ಯಾರು ವಿದ್ಯಾದಾಯಿನಿ ಹಿ.ಪ್ರಾ.ಶಾಲೆಯ ಪ್ರಾಂಗಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜರಗಲಿರುವ ಸಹಸ್ರಮಾನ ನವಕುಂಡ ಶ್ರೀ ಮಹಾಗಣಪತಿ ಅಥರ್ವ ಶೀರ್ಷ ಮಹಾಯಾಗದ ಕಾರ್ಯಕ್ಕೆ ಡಿ.25 ರಂದು ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಂದ ಸಂಕಲ್ಪದೊಂದಿಗೆ ಚಾಲನೆ ದೊರೆತಿದ್ದು, ಗುರುವಾರ ಶ್ರೀ ಸಿದ್ಧಿವಿನಾಯಕ ದೇವರ ಶೋಭಾಯಾತ್ರೆಗೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡಿದರು.

ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಬಳಿಯಿಂದ ಕುತ್ಯಾರು ಯಾಗ ಪ್ರಾಂಗಣದವರೆಗೆ ವಿವಿಧ ವಾದ್ಯ ಘೋಷ, ಬಿರುದಾವಳಿಗಳೊಂದಿಗೆ ಶ್ರೀ ಸಿದ್ಧಿ ವಿನಾಯಕ ದೇವರ ಶೋಭಾಯಾತ್ರೆ, ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೈಭವೋಪೇತವಾಗಿ ಯಾಗಮಂಟಪಕ್ಕೆ ಕರೆತರಲಾಯಿತು. ಋತ್ವಿಜರಿಂದ ವಾಸ್ತು ವಿಧಿ ವಿಧಾನದ ಮೂಲಕ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠೆ ಸಂಪನ್ನಗೊಂಡಿದ್ದು, ಬಳಿಕ ಶ್ರೀಗಳಿಂದ ಆಶೀರ್ವಚನ,ಫಲ ಮಂತ್ರಾಕ್ಷತೆ ನಡೆಯಿತು. ಅನ್ನ ಸಂತರ್ಪಣೆಯ ಪ್ರಾಯೋಜಕರಾದ ಕುತ್ಯಾರು ಅಂಜಾರುಮನೆ ನಾರಾಯಣ ಶೆಟ್ಟಿಯವರನ್ನು ಗೌರವಿಸಲಾಯಿತು.

ಯಾಗದ ಮಹಾಸಂಚಾಲಕ ವೇ|ಮೂ|ಕುತ್ಯಾರು ಕೇಂಜ ಶ್ರೀಧರ ತಂತ್ರಿ,ಯಾಗ ಸಂಘಟನಾ ಸಮಿತಿಯ ಕಾರ್ಯಾಧ್ಯಕ್ಷ ಕುತ್ಯಾರು ನವೀನ್‌ ಶೆಟ್ಟಿ , ಮುಖ್ಯ ವ್ಯವಸ್ಥಾಪಕ ಕುತ್ಯಾರು ಪ್ರಸಾದ್‌ ಶೆಟ್ಟಿ , ಸಾಯಿನಾಥ ಶೆಟ್ಟಿ,ಕುತ್ಯಾರು ಗ್ರಾ. ಪಂ. ಅಧ್ಯಕ್ಷ ಧೀರಜ್‌ ಶೆಟ್ಟಿ,ಯಾಗ ಸಮಿತಿಯ ಗೌರವಾಧ್ಯಕ್ಷ ಜಿನೇಶ್‌ ಬಲ್ಲಾಳ್‌,ವಿದ್ವಾನ್‌ ಶಂಭುದಾಸ ಗುರೂಜಿ, ನಾರಾಯಣ ತಂತ್ರಿ ,ಸುಧಾಕರ ಭಂಟ್ರಿಯಾಲ್‌ ,ಕಿಶೋರ್‌ಕುಮಾರ್‌ ಶೆಟ್ಟಿ, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್‌ ಆಚಾರ್ಯ, ಉಪನ್ಯಾಸಕ ಅನಂತ ಮೂಡಿತ್ತಾಯ,ವಿವಿಧ ಮಹಿಳಾ ಸಂಘದ ಸದಸ್ಯರು,ಶ್ರೀ ಕ್ಷೇತ್ರ ಧ.ಗಾ.ಯೋಜನೆಯ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಯುವಕ ಮಂಡಲದ ಸದಸ್ಯರು, ಯಾಗದ ವಿವಿಧ ಸಮಿತಿಯ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.ಬೆಳಿಗ್ಗೆ ಖಂಡಗ್ರಾಸ ಸೂರ್ಯಗ್ರಹಣದ ಸಂದರ್ಭದಲ್ಲಿ ಕುತ್ಯಾರು ಯಾಗ ಮಂಟಪದಲ್ಲಿ ನವಗ್ರಹಯುಕ್ತ ಗ್ರಹಣ ಶಾಂತಿ ನಡೆಯಿತು. ವಿದ್ವಾಂಸರಾದ ಪುನರೂರು ವಿಷ್ಣುಮೂರ್ತಿ ಆಚಾರ್ಯ, ಕುತ್ಯಾರು ಶ್ರೀಶ ತಂತ್ರಿ,ಶೀರೂರು ರಾಮಚಂದ್ರ ಭಟ್‌, ಕುಂಭಾಶಿ ನಾಗರಾಜ ಭಟ್‌,ಬೆಳ್ಳಿಬೆಟ್ಟು ಗಣೇಶ್‌ ಭಟ್‌, ವಿಷ್ಣುಮೂರ್ತಿ ಸರಳಾಯ,ಜನಾರ್ಧನ ಭಟ್‌, ಕೇಂಜ ಹರಿಕೃಷ್ಣ ಭಟ್‌,ನಂದಿಕೂರು ಕೃಷ್ಣಮೂರ್ತಿ ಭಟ್‌, ಕೇಂಜ ಭಾರ್ಗವ ತಂತ್ರಿ ಪುರೋಹಿತರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here