Home ನಂಬಿಕೆ ಸುತ್ತಮುತ್ತ ವರ್ಷಕ್ಕೊಮ್ಮೆ ‘ಬೇಷ’ತಿಂಗಳಲ್ಲಿ ತಂಪೆರೆಸಿಕೊಳ್ಳುವ ವಿಶಿಷ್ಟ ನಾಗಬನ

ವರ್ಷಕ್ಕೊಮ್ಮೆ ‘ಬೇಷ’ತಿಂಗಳಲ್ಲಿ ತಂಪೆರೆಸಿಕೊಳ್ಳುವ ವಿಶಿಷ್ಟ ನಾಗಬನ

ಕುತ್ಯಾರು ಸಮೀಪದ ಮೂಲ್ದೊಟ್ಟು ನಾಗಬನ

534
0
SHARE

ಶಿರ್ವ: ಇಲ್ಲೊಂದು ವಿಶಿಷ್ಟ ನಾಗಬನ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ನಾಗಬನದಲ್ಲಿ ತಂಪೆರೆಯಲು ನಾಗರಪಂಚಮಿಯಂತಹ ಪರ್ವ ದಿನದಲ್ಲಾಗಲೀ,ಭಕ್ತರು ಬಯಸಿದ ಇತರ ದಿನದಲ್ಲಾಗಲೀ ಅವಕಾಶವಿಲ್ಲ. ಕೇವಲ ವರ್ಷಕ್ಕೊಮ್ಮೆ ತುಳು ಬೇಷ ತಿಂಗಳ ಮೊದಲ ಗುರುವಾರ ಮಾತ್ರವೇ ಈ ಬನಕ್ಕೆ ಆಗಮಿಸಿ ಪೂಜೆ ಸಲ್ಲಿಸಲಾಗುತ್ತದೆ.

ಈ ನಾಗಬನ ಕಾಪು ತಾಲೂಕಿನ ಕುತ್ಯಾರು ಮೂಲ್ದೊ ಟ್ಟುವಿನಲ್ಲಿದೆ. ನೈಸರ್ಗಿಕ ಸ್ವರೂಪ ಉಳಿಸಿಕೊಂಡ ಇದು ಕಾಡಿನ ಇಳಿಜಾರಿನಲ್ಲಿದೆ. ಮರ ಗಳ ಬುಡದಲ್ಲಿಯೇ ಪುರಾತನ ನಾಗ ಸನ್ನಿಧಾನವಿದ್ದು ಸುಮಾರು 11 ನಾಗನ ಶಿಲಾ ಕಲ್ಲುಗ ಳಿವೆ.

ಐತಿಹಾಸಿಕ ಹಿನ್ನೆಲೆ: ತುಳುನಾಡಿನಲ್ಲಿ ಕೃಷಿಕರ ಮಳೆಗಾಲದ ಪೂರ್ವ ತಯಾರಿಗಾಗಿ ಶಿರ್ವ ಮಟ್ಟಾರು ಮಹಾಬಬ್ಬರ್ಯನ ಸನ್ನಿಧಾನದ ಬಾಕಿಮಾರು ಗದ್ದೆಯಲ್ಲಿ ‘ಮಟ್ರಾಕ್ಯಾರು‡’ ಒಂದು ತಿಂಗಳ ಸಂತೆ ನಡೆಯುತ್ತಿತ್ತು.ಬೇಷ ತಿಂಗಳ ಸಂಕ್ರಮಣದ ಮುಂದಿನ ಮಂಗಳವಾರ ಸಂತೆಗೆಂದು ಹಾಕಲಾದ ಕೋಳಿಗುಂಟ ತೆಗೆಯಲಾಗುತ್ತಿತ್ತು. ಅದರ ಮುಂದಿನ ಗುರುವಾರ ಮೂಲ್ದೊಟ್ಟು ನಾಗಬನದಲ್ಲಿ ಮೊಗೇರ ಸಮುದಾಯದವರಿಂದ ನಾಗನಿಗೆ ತಂಪೆರೆ ಯುವುದು ಸಂಪ್ರದಾಯ.

ಮುರಿ ಮಯಿಪಾದ್‌ ದೀಪಾವೆ: ಇಲ್ಲಿ ಹರಕೆ ಒಪ್ಪಿಸುವವರು, ಹೇಳಿಕೊಳ್ಳುವವರು ಏನಿದ್ದರೂ ಗುರಿಕಾರರ ಮೂಲಕವೇ ಆಗಬೇಕು. ಸರ್ವವರ್ಗದವರ ಹರಕೆಯೂ ಬರುತ್ತಿದ್ದು ‘ಮುರಿ ಮಯಿಪಾದ್‌ ದೀಪಾʇೆ’ ಎಂಬ ಹರಕೆ ವಿಶೇಷವಾಗಿ ಗಮನ ಸೆಳೆ ಯುತ್ತದೆ.

ಚಿನ್ನ ಬೆಳ್ಳಿಯ ಹರಕೆ ಬಂದಲ್ಲಿ ನಾಗ ಸನ್ನಿಧಿಯ ಕಲ್ಲಿನ ಬುಡದಲ್ಲಿಯೇ ಇvಲಾಗುತ್ತಿದ್ದು ಹರಕೆಗೆ ಸರ್ಪಗಾವಲಿರುತ್ತದೆ ಎಂಬುದು ನಂಬಿಕೆ. ಈ ಬಾರಿಯೂ ವಿವಿಧ ಜಿಲ್ಲೆಗಳಿಂದ ಸುಮಾರು 500 ಭಕ್ತರು ಪೂಜೆಗೆ ಆಗಮಿಸಿದ್ದು ಗುರಿಕಾರ ರವೀಂದ್ರನಾಥ್‌ ಎಸ್‌. ಅವರ ನೇತೃತ್ವದಲ್ಲಿ ನಾಗಾರಾಧನೆ ಸಂಪನ್ನಗೊಂಡಿದೆ. ಮೂಲ್ದೊಟ್ಟು ನಾಗಬನದಂತಹ ನಾಗಬನಗಳು ಕರಾವಳಿಯುದ್ದಕ್ಕೂ ಇದ್ದು ಆಧುನಿಕತೆಯ ಭರಾಟೆಯಲ್ಲಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿವೆ.ಆದರೆ ಗುರುಕಾರ ರವೀಂದ್ರನಾಥ್‌ ಈ ನಾಗಬನದಲ್ಲಿ ಬದಲಾವಣೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ. ಮೂಲ್ದೊಟ್ಟು ನಾಗಬನ ದಲ್ಲಿ ಮಾತ್ರ ಬೇಷದ ಮೊದಲ ಗುರುವಾರ ನಾಗಾರಾಧನೆ ನೆರವೇರುವುದು ಕರಾವಳಿಯಲ್ಲಿ ವಿಶೇಷವಾಗಿದೆ.

ಪ್ರಧಾನ ನಾಗಬನ
ಪರಿಶಿಷ್ಠ ವರ್ಗದ ಮೊಗೇರ ಜನಾಂಗದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗಬನವಾಗಿದ್ದು ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುರ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರವೇ ಸನ್ನಿಧಿಯಲ್ಲಿ ತಂಪರೆದು ಪೂಜೆ ಸಲ್ಲಿಸುವ ಅಧಿಕಾರವಿದೆ.

ಸತೀಶ್ಚಂದ್ರ ಶೆಟ್ಟಿ, ಶಿರ್ವ

LEAVE A REPLY

Please enter your comment!
Please enter your name here