Home ಧಾರ್ಮಿಕ ಕಾರ್ಯಕ್ರಮ ಶಿರ್ವ: ಆಟಿ ತಿಂಗಳ ಮಾರಿಪೂಜೆ ಸಂಪನ್ನ

ಶಿರ್ವ: ಆಟಿ ತಿಂಗಳ ಮಾರಿಪೂಜೆ ಸಂಪನ್ನ

1294
0
SHARE

ಶಿರ್ವ: ಇಲ್ಲಿನ ಮಹಮ್ಮಾಯಿ ಮಾರಿಗುಡಿಯಲ್ಲಿ ಆಟಿತಿಂಗಳ ಮಾರಿಪೂಜೆಯು ವೇ|ಮೂ| ವೆಂಕಟರಮಣ ಭಟ್ ಅವರ ನೇತೃತ್ವದಲ್ಲಿ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ವೇ|ಮೂ| ರಘುಪತಿ ಗುಂಡು ಭಟ್ ಮತ್ತು ವೇ|ಮೂ|ಶಿರ್ವ ಶ್ರೀನಿವಾಸ ಭಟ್ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದರ್ಶನ ಸೇವೆ ನಡೆದು ಬುಧವಾರ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ಗದ್ದುಗೆಯೇರಿದ ಬಳಿಕ ಧಾರ್ಮಿಕ ವಿಧಿಯೊಂದಿಗೆ ಪೂಜೆ ನಡೆದು ಬುಧವಾರ ಮಧ್ಯಾಹ್ನ ಮಹಾಪೂಜೆ ನೆರವೇರಿತು. ಬಳಿಕ ಸಂಪ್ರದಾಯದಂತೆ ದರ್ಶನ ಸೇವೆ ನಡೆದು ಆಟಿ ತಿಂಗಳ ಮಾರಿಪೂಜೆ ಸಂಪನ್ನಗೊಂಡಿತು.

ಹಿರಿಯರಾದ ಶಿರ್ವ ನಡಿಬೆಟ್ಟು ದಾಮೋದರ ಚೌಟ, ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆ,ರತ್ನವರ್ಮ ಹೆಗ್ಡೆ, ಶಿರ್ವ ಮಾಣಿಬೆಟ್ಟು ಅರಂತಡೆ ಮೋಹನದಾಸ ಹೆಗ್ಡೆ, ಸುಬ್ಬಯ್ಯ ಹೆಗ್ಡೆ,ಶೇಖರ ಶೆಟ್ಟಿ ನಡಾಯಿ, ಸುಂದರ ಶೆಟ್ಟಿ, ರಾಘವೇಂದ್ರ ಭಟ್, ಶ್ರೀಪತಿ ಭಟ್,ವಿಶ್ವರಾಜ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here