ಶಿರ್ವ: ಕಾಶೀಮಠ ಶಿರ್ವ ಶ್ರೀ ಮಹಾಲಸಾ ನಾರಾಯಣೀ ದೇವಿಯ ಸನ್ನಿಧಿಯಲ್ಲಿ ಪಶ್ಚಿಮ ಜಾಗರಣೆಯ ಅಂಗವಾಗಿ ಕಾರ್ತಿಕ ಮಾಸದಲ್ಲಿ ವರ್ಷಂಪ್ರತಿ ನಡೆಯುವ ಸಹಸ್ರಾರು ಹಣತೆಗಳ ದೀಪಾಲಂಕಾರ ಪೂಜಾ ವೈಭವ ವಿಶ್ವರೂಪ ದರ್ಶನ ಸೇವೆಯು ಗುರುವಾರ ಮುಂಜಾವ ಗಂಟೆ 5.00ಕ್ಕೆ ನೆರವೇರಿತು.
ಪ್ರಾತಃಕಾಲ ದೇವಸ್ಥಾನದ ಭಕ್ತಾದಿಗಳಿಂದ ಭಜನ ಸೇವೆ ನಡೆದು ಬೆಳಗ್ಗೆ ಗಂ.5ರಿಂದ ದೀಪಾಲಂಕಾರ,ಉಷಃಕಾಲದ ಜಾಗರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ವಿಧಿ ವಿಧಾನಗಳು ದೇವಸ್ಥಾನದ ಪ್ರಧಾನ ಅರ್ಚಕ ರಘುರಾಮ ಭಟ್ ಅವರ ನೇತೃತ್ವದಲ್ಲಿ ನಡೆದವು.
ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ದೀಪಾರಾಧನೆ ಮಾಡಿದರೆ ಆರೋಗ್ಯ ರಕ್ಷಾ ದೀಪವಾಗಿ ಸಕಲ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ ಭಕ್ತರು ಸಹಸ್ರಾರು ಹಣತೆಗಳನ್ನು ಉರಿಸಿ ದೀಪಾಲಂಕಾರ ಪೂಜಾ ವೈಭವದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಯ ಸದಸ್ಯರಾದ ರಾಮದಾಸ ಶೆಣೈ, ಸತ್ಯನಾರಾಯಣ ನಾಯಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸðತ ಸಮಾಜ ಸೇವಕ ಅನಂತ್ರಾಯ ಶೆಣೈ, ಶಿರ್ವ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶ್ರೀಪತಿ ಕಾಮತ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಜಿ. ವಸಂತ ಶೆಣೈ, ಡಾ| ವಿ.ಎಸ್.ಬೆಳ್ಳೆ, ಪತಂಜಲಿ ಯೋಗ ಸಮಿತಿಯ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.