Home ಧಾರ್ಮಿಕ ಕಾರ್ಯಕ್ರಮ ಶಿರ್ವ: ರಜತ ಪಲ್ಲಕಿ ಸಮರ್ಪಣೆ

ಶಿರ್ವ: ರಜತ ಪಲ್ಲಕಿ ಸಮರ್ಪಣೆ

1006
0
SHARE

ಶಿರ್ವ: ಇಲ್ಲಿನ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ತಮ್ಮ ಸೇವಾರ್ಥವಾಗಿ ಸುಮಾರು 8 ಲ. ರೂ. ಮೌಲ್ಯದ ರಜತ ಪಲ್ಲಕ್ಕಿಯನ್ನು ಶ್ರೀ ದೇವರಿಗೆ ರವಿವಾರ ಸಮರ್ಪಿಸಿದರು. ದೇವಸ್ಥಾನದ ಅರ್ಚಕ ರಘುಪತಿ ಗುಂಡು ಭಟ್‌ ಅವರ ಉಪಸ್ಥಿತಿಯಲ್ಲಿ ಅರ್ಚಕ ಶಿರ್ವ ಶ್ರೀನಿವಾಸ ಭಟ್‌ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ರಜತ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ, ನಿಟ್ಟೆ ವಿ.ವಿ.ಯ ಕುಲಪತಿ ಎನ್‌. ವಿನಯ ಹೆಗ್ಡೆ, ಬೈಲೂರು ಸುಧೀರ್‌ ಹೆಗ್ಡೆ, ಹಿರಿಯರಾದ ಶಿರ್ವ ನಡಿಬೆಟ್ಟು ಸೀತಾರಾಮ ಹೆಗ್ಡೆ, ಶಿರ್ವ ನಡಿನೆಟ್ಟು ರತ್ನವರ್ಮ ಹೆಗ್ಡೆ,ಸೂಡಾ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ,ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎನ್‌.ಸುಹಾಸ ಹೆಗ್ಡೆ,ಬೆಳ್ಮಣ್‌ ನ ಎಸ್‌.ಕೆ. ಸಾಲ್ಯಾನ್‌,ತಮ್ಮಣ್ಣ ಪೂಜಾರಿ, ವಿಠಲ ಅಂಚನ್‌, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here