Home ಧಾರ್ಮಿಕ ಸುದ್ದಿ ಶಿರಿಡಿ ಶ್ರೀ ಸಾಯಿ ಸಮಾಧಿ ಶತಾಬ್ಧ:ಮನೆಗಳ ಭೇಟಿಗೆ ಚಾಲನೆ

ಶಿರಿಡಿ ಶ್ರೀ ಸಾಯಿ ಸಮಾಧಿ ಶತಾಬ್ಧ:ಮನೆಗಳ ಭೇಟಿಗೆ ಚಾಲನೆ

1587
0
SHARE

ಮಹಾನಗರ: ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದ ವತಿಯಿಂದ ಶ್ರೀ ಸಾಯಿನಾಥರ ಆರಾಧನ ಮಹೋತ್ಸವದ ಶ್ರೀ ಸಾಯಿ ಸಮಾಧಿ ಶತಾಬ್ಧ ವರ್ಷದ ಅಂಗವಾಗಿ ಮಂದಿರ ವತಿಯಿಂದ ಸಾಯಿನಾಥರ ಉತ್ಸವ ಮೂರ್ತಿಯೊಂದಿಗೆ ನೂರು ಮನೆಗಳಿಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಪ್ರಥಮ ಬಾರಿಗೆ ಶ್ರೀ ಸಾಯಿಬಾಬರ ಮೂಲ ಪಾದುಕೆಯು ಶಿರಿಡಿಯಿಂದ ನಗರದ ಸಾಯಿಬಾಬಾ ಮಂದಿರಕ್ಕೆ ಆಗಮಿಸಿ ಆರಾಧಿಸಲಾಗುತ್ತಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಸಾಯಿನಾಥರ ಉತ್ಸವ ಮೂರ್ತಿಯೊಂದಿಗೆ ನೂರು ಮನೆಗಳಿಗೆ ಭೇಟಿ ನೀಡುವ ಮೂಲಕ ಬಾಬಾ ಅವರ ಸೇವೆಯ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಾಯಿಬಾಬ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್‌ ಕುಮಾರ್‌ ದಾಸ್‌ ತಿಳಿಸಿದರು.

ಲಾವಣ್ಯಾ ವಿಶ್ವಾಸ್‌ಕುಮಾರ್‌ದಾಸ್‌, ಮಂದಿರದ ಅರ್ಚಕ ವಿದ್ವಾನ್‌ ಸುನಿಲ್‌ ಭಟ್‌, ಗುರು ಹಿರೇಮಠ, ಪ್ರತಾಪಚಂದ್ರ ಶೆಟ್ಟಿ, ಜಗದೀಶ್‌ ಶೆಟ್ಟಿ ಬಿಜೈ ಮೊದ ಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here