ಸುರತ್ಕಲ್: ಇಲ್ಲಿನ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಆರಂಭಗೊಂಡಿದ್ದು ಸೋಮವಾರ ಶ್ರೀ ಉಳ್ಳಾಯ ದೈವದ ನೇಮ, ಉರುಳು ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಮಂಗಳವಾರ ರಾತ್ರಿ 9ರಿಂದ ಶ್ರೀ ಕಾಂತೇರಿ ಧೂಮಾವತಿ ದೈವಸ್ಥಾನದ ನೇಮ, ಡಿ. 19ರಂದು ಶ್ರೀ ಸರಳ ಧೂಮಾವತಿ ನೇಮ, ಡಿ. 20ರಂದು ಶ್ರೀ ಜಾರಂದಾಯ, ಡಿ. 21ರಂದು ಶ್ರೀ ಕೈಯ್ಯೂರು ಧೂಮಾವತಿ ನೇಮ ಜರಗಲಿದೆ.
ಡಿ. 22ರಂದು ಶ್ರೀ ಪಿಲಿಚಾಮುಂಡಿ ನೇಮ, ಡಿ. 23ರಂದು ಬೆಳಗ್ಗೆ ತುಲಾಭಾರ ಸೇವೆ, ಧ್ವಜಾವರೋಹಣ ನಡೆಯಲಿದೆ. ವಾರ್ಷಿಕ ಮಹೋತ್ಸವದ ಸಂದರ್ಭ ಪ್ರತಿ ದಿನ ಹಾಗೂ ಪ್ರತಿ ಸಂಕ್ರಮಣದಂದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.