Home ಧಾರ್ಮಿಕ ಸುದ್ದಿ ಒಡ್ಡೂರು ಫಾರ್ಮ್ ಹೌಸ್‌ ನಲ್ಲಿ ಶತಚಂಡಿಕಾಯಾಗ-ಧರ್ಮನೇಮ

ಒಡ್ಡೂರು ಫಾರ್ಮ್ ಹೌಸ್‌ ನಲ್ಲಿ ಶತಚಂಡಿಕಾಯಾಗ-ಧರ್ಮನೇಮ

963
0
SHARE

ಬಂಟ್ವಾಳ: ಒಡ್ಡೂರು ಫಾರ್ಮ್ ಹೌಸ್‌ನಲ್ಲಿ ಶನಿವಾರ ಆಯೋಜನೆಗೊಂಡಿದ್ದ ಶತಚಂಡಿಕಾಯಾಗ ಹಾಗೂ ಧರ್ಮನೇಮದಲ್ಲಿ ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ಆದರಾತಿಥ್ಯ ಸ್ವೀಕರಿಸಿದರು.

ಬೆಳಗ್ಗೆ ಸ್ವಸ್ತಿವಾಚನ, ಶತಚಂಡಿಕಾ ಯಾಗ, ಯಾಗದ ಪೂರ್ಣಾಹುತಿ, ಧರ್ಮನೇಮಕ್ಕೆ ಕೊಡಮಣಿತ್ತಾಯ ದೈವದ ಭಂಡಾರ ಏರುವುದು, ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ಯಕ್ಷ ಗಾನ ವೈಭವ, ಹಾಸ್ಯವೈಭವ ಹಾಗೂ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡಿತು.

ರಾಜ್ಯ-ಕೇಂದ್ರ ಸರಕಾರದ ಸಚಿವರು, ಸಂತರು, ವಿವಿಧ ಕ್ಷೇತ್ರಗಳ ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಉದ್ಯಮಿಗಳು, ಜಿ.ಪಂ., ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಉದ್ಯಮಿಗಳು ಮೊದಲಾದ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.

ಆಗಮಿಸಿದ ಭಕ್ತರಿಗೆ ಊಟೋಪಚಾರ ಸಹಿತ ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿತ್ತು. ಸಾವಿರಾರು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿನಲ್ಲಿ ಶ್ರಮಿಸಿದ್ದರು. ವಾಹನಗಳ ನಿಲುಗಡೆಗೆ ವಿಶಾಲ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು, ಸ್ವಯಂಸೇವಕರು ವಾಹನಗಳ ಅಚ್ಚುಕಟ್ಟಿನ ನಿಲುಗಡೆಗೆ ಶ್ರಮಿಸಿದರು.

ಅನ್ನಛತ್ರದಲ್ಲೂ ನೂರಾರು ಸ್ವಯಂ ಸೇವಕರು ಭಕ್ತರಿಗೆ ಅನ್ನಪ್ರಸಾದ, ಉಪಾಹಾರ ವಿತರಣೆಯ ಜವಾಬ್ದಾರಿ ನಿರ್ವಹಿಸಿದರು. ಬಿ.ಸಿ. ರೋಡ್‌ನ‌ ಶ್ರೀ ರಕ್ತೇಶ್ವರೀ ಸನ್ನಿಧಿಯ ಬಳಿಯಿಂದ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದು, ಸಾವಿರಾರು ಮಂದಿ ಅದರ ಪ್ರಯೋಜನ ಪಡೆದುಕೊಂಡರು.

ಬೆಳಗ್ಗಿನಿಂದ ರಾತ್ರಿವರೆಗೂ ಭಕ್ತರು ಒಡ್ಡೂರಿನ ಕಾರ್ಯಕ್ರಮಕ್ಕೆ ಆಗಮಿಸುತ್ತಲೇ ಇದ್ದು, ಉಳಿಪ್ಪಾಡಿಗುತ್ತು ಕುಟುಂಬಿಕರು ಭಕ್ತರನ್ನು ಸತ್ಕರಿಸಿದರು. ಒಡ್ಡೂರಿನ ಧರ್ಮಚಾವಡಿ, ಶಾಸಕರ ಮನೆಯನ್ನು ಪುಷ್ಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಅಲ್ಲಿನ ಕೃಷಿ ಬೆಳೆಗಳು ಆಗಮಿಸಿದ ಜನತೆಯ ಮೆಚ್ಚುಗೆಗೆ ಪಾತ್ರವಾದವು.

LEAVE A REPLY

Please enter your comment!
Please enter your name here