Home Uncategorized ಷಷ್ಠಿ ಸಂಭ್ರಮ: ಪಾವಂಜೆಯಲ್ಲಿ ಮೂಡು ಗಣಪತಿ ಸೇವೆ

ಷಷ್ಠಿ ಸಂಭ್ರಮ: ಪಾವಂಜೆಯಲ್ಲಿ ಮೂಡು ಗಣಪತಿ ಸೇವೆ

864
0
SHARE

ಪಾವಂಜೆ: ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ಸಾವಿರದೆಂಟು (1008)ತೆಂಗಿನಕಾಯಿ ಯಿಂದ ನಿರ್ಮಿಸಿದ ಮೂಡುಗಣಪತಿ ಸೇವೆ ವಿಶಿಷ್ಠವಾಗಿ ನೆರವೇರಿದೆ.

ಮೂಡುಗಣಪತಿ ಸೇವೆಯು ಅತಿ ಪುರಾತನ ಹಾಗೂ ಫಲದಾಯಕ ಎಂಬ ನಂಬಿಕೆಯಿಂದ ಸೇವೆ ನೀಡುವ ಪ್ರತೀತಿ ನಡೆದು ಬಂದಿದೆ. ಭಕ್ತರು ತೆಂಗಿನ ಕಾಯಿಯನ್ನು ಎರಡು ಹೋಳು ಮಾಡಿ ತಮ್ಮ ವೈಯಕ್ತಿಕ ಹರಕೆಯನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಭಕ್ತರು ನೀಡಿದ ತೆಂಗಿನಕಾಯಿಯ ಹೋಳಿನಿಂದಲೇ ಗಣ ಪತಿಯ ಆಕಾರವನ್ನು ನಿರ್ಮಿಸಿ ಅದಕ್ಕೆ ಸೀರೆಯ ಹೊದಿಕೆಯ ಶೃಂಗಾರವನ್ನು ಮಾಡಿ ದಿನಪೂರ್ತಿ ಇಡಲಾಗುತ್ತದೆ.

ಸೇವಾದಾರರು ತೆಂಗಿನಕಾಯಿಯೊಂ ದಿಗೆ ಗರಿಕೆ, ಹೂ, ಬಾಳೆಹಣ್ಣು, ಅರಸಿನ, ಕುಂಕುಮ, ಕರ್ಪೂರ, ಅಗರಬತ್ತಿ, ವೀಳ್ಯದೆಲೆ, ಅಡಿಕೆಯನ್ನು ನೀಡಬೇಕು. ಇಲ್ಲಿ ನಡೆಯುವ ಚಂಪಾಷಷ್ಠಿಯಲ್ಲಿ ಮೂಡುಗಣಪತಿ ಸೇವೆ ಹಾಗೂ ವೈದಿಕ ನಾಗಮಂಡಲ ಸೇವೆ ಪ್ರಸಿದ್ಧಿ ಪಡೆದಿದೆ. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನ

ತೋಕೂರು: ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾ ಗಣ ಪತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರುತ್ತಿದೆ. ಸಾವಿರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಗಳನ್ನು ಬೆಳ್ಳಿಯ ರೂಪದಲ್ಲಿ ದೇವರಿಗೆ ನೀಡುವ ಪದ್ಧತಿ ಸಂಪ್ರದಾಯವಾಗಿದೆ. ಷಷ್ಠಿ ಮಹೋತ್ಸವ ಧ್ವಜಾವರೋಹಣ ನಡೆದು ಒಂದು ತಿಂಗಳ ಅಂತರದಲ್ಲಿ ಕಿರು ಷಷ್ಠಿಯ ಮಹೋತ್ಸವವು ನಡೆಯುವುದು ಇಲ್ಲಿನ ಪರಂಪರೆ.

ಕಿಲ್ಪಾಡಿ ಕುಮಾರ ಮಂಗಲ ಶ್ರೀಸುಬ್ರಾಯ ದೇವಸ್ಥಾನ
ಮೂಲ್ಕಿ:
ಕಿಲ್ಪಾಡಿ ಕುಮಾರ ಮಂಗಲ ಶ್ರೀಸುಬ್ರಾಯ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಡಿ.13ರಂದು ವಿವಿಧ ಬಲಿ ಉತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಡಿ. 13ರಂದು ನಡೆಯಲಿದೆ.

ಕಂದಾವರ: ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನ
ಕಂದಾವರ: ಇಲ್ಲಿನ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಮಹೋತ್ಸವವು ಡಿ.13ರಂದು ಜರಗಲಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ಬಳಿಕ ದೇವಸ್ಥಾನದ ಜೀಣೋ ದ್ಧಾರದ ಕುರಿತು ಸಭೆ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here