ಸುಳ್ಯ : ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಮಂಗಳವಾರ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಬಳ್ಳಕಾನ ಗೊನೆ ಮುಹೂರ್ತ ನೆರವೇರಿಸಿದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಣೇಶ್ ಭಟ್ ಬೊಮ್ಮಾರು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಗೌಡ ಹೊಸೊಳಿಕೆ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಶಿವ ಪಂಚಾಕ್ಷರಿ ಭಜನ ಮಂಡಳಿ ಅಧ್ಯಕ್ಷ ಮಂಜಪ್ಪ ಗೌಡ ಕಾಡುತೋಟ, ಶಶಿಕಾಂತ್ ಗುಳಿಗಮೂಲೆ, ಮಹಾಬಲ ಕಾಡಿತೋಟ, ಚಿನ್ನಪ್ಪ ಗೌಡ, ಜಗಮೋಹನ್ ರೈ ರೆಂಜಾಳ, ಕುಮಾರಸ್ವಾಮಿ ರೆಂಜಾಳ ಉಪಸ್ಥಿತರಿದ್ದರು