Home ಧಾರ್ಮಿಕ ಕಾರ್ಯಕ್ರಮ ಶರವೂರು ದೇಗುಲ: ಅರ್ಧ ಏಕಾಹ ಭಜನೆ ಸಂಪನ್ನ

ಶರವೂರು ದೇಗುಲ: ಅರ್ಧ ಏಕಾಹ ಭಜನೆ ಸಂಪನ್ನ

1902
0
SHARE
ಶರವೂರು ದುರ್ಗಾ ಪರಮೇಶ್ವರೀ ದೇವಾಲಯದಲ್ಲಿ ಅರ್ಧ ಏಕಾಹ ಭಜನೆ ಜರಗಿತು.

ಆಲಂಕಾರು: ಶರವೂರು ಶ್ರೀ ದುರ್ಗಾ ಪರಮೇಶ್ವರೀ ದೇವಾಲಯದಲ್ಲಿ ಶುಕ್ರವಾರ ಆಹ್ವಾನಿತ ಭಜನ ತಂಡಗಳ ಅರ್ಧ ಏಕಾಹ ಭಜನೆ ನಡೆಯಿತು.

ಬೆಳಗ್ಗೆ 6ರಿಂದ ಆರಂಭವಾದ ಭಜನೆ ಸಂಜೆ 6ರ ತನಕ ಯಶಸ್ವಿಯಾಗಿ ನಡೆಯಿತು. ಭಜನೆಯನ್ನು ಆದಿಶಕ್ತಿ ಭಜನ ಮಂಡಳಿ ಶ್ರೀ ಕ್ಷೇತ್ರ ಶರವೂರು, ನಾರಾಯಣಗುರು ಭಜನ ತರಬೇತಿ ಕೇಂದ್ರ ಆಲಂಕಾರು, ಮಾತೃಶ್ರೀ ಭಜನ ಮಂಡಳಿ ಕೊಂಡಾಡಿಕೊಪ್ಪ, ಶ್ರೀಹರಿ ಭಜನ ಮಂಡಳಿ ಗಾಣಂತಿ, ಶ್ರೀ ಪಾಂಡುರಂಗ ಭಜನ ಮಂಡಳಿ ಮನವಳಿಕೆ, ಶ್ರೀ ಶಾರದಾ ಭಜನ ಮಂಡಳಿ ಕುಂತೂರು, ಶ್ರೀ ಉಮಾಮಹೇಶ್ವರಿ ಭಜನ ಮಂಡಳಿ ಬಲ್ಯ, ಶ್ರೀ ದುರ್ಗಾಂಬಿಕಾ ಭಜನ ಮಂಡಳಿ ಕಡಬ, ಶ್ರೀ ಶಾರದಾಂಬ ಭಜನ ಮಂಡಳಿ ಶಾರದಾ ನಗರ ರಾಮಕುಂಜ, ಶ್ರೀದುರ್ಗಾ ಭಜನ ಮಂಡಳಿ ನಡುಗಲ್ಲು ಸುಬ್ರಹ್ಮಣ್ಯ, ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿ ಕೆಮ್ಮಾರ, ಶ್ರೀ ವಿಘ್ನೕಶ್ವರ ಭಜನ ಮಂಡಳಿ ನೆಟ್ಟಣ ಮುಂತಾದ ಆಹ್ವಾನಿತ ತಂಡಗಳ ಸದಸ್ಯರು ಭಜನೆ ನಡೆಸಿಕೊಟ್ಟರು.

ಬೆಳಗ್ಗೆ ದೇವಾಲಯದ ಅರ್ಚಕ ರಾಘವೇಂದ್ರ ಪ್ರಸಾದ್‌ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಟ್ಟು, ದೀಪ ಬೆಳಗಿಸಿ ಚಾಲನೆ ನೀಡಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಮಲಾಕ್ಷ ರೈ, ಸದಸ್ಯರಾದ ಉಮೇಶ್‌ ದೇವಾಡಿಗ, ಕರಿಯ ಗಾಣಂತಿ, ಮೀನಾಕ್ಷಿ, ಗುಪ್ರಸಾದ್‌, ಅಮೃತಾ ಜೆ. ರೈ ಉಪಸ್ಥಿತರಿದ್ದರು. ಭಜನೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳ ಸದಸ್ಯರಿಗೆ ಶಾಲು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here