ಆಲಂಕಾರು : ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕಮಲಾಕ್ಷ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಲಂಕಾರು, ಹಳೇನೆರೆಂಕಿ, ಪೆರಾಬೆ, ಕುಂತೂರು ಗ್ರಾಮಗಳ ಸೀಮಾ ದೇವಸ್ಥಾನವಾಗಿರುವ ಶರವೂರು ದೇವಾಲಯದ ವಾರ್ಷಿಕ ಜಾತ್ರೆ ಮಾ. 14ರಿಂದ 23ರ ವರೆಗೆ ನಡೆಯಲಿದೆ. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಕಮಲಾಕ್ಷ ರೈ ಪರಾರಿಗುತ್ತು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಕರಿಯಮುಗೇರ ಗಾಣಂತಿ ಆಲಂಕಾರು, ಮೀನಾಕ್ಷಿ ಹರೀಶ್ ಪೂಜಾರಿ ಸಾಂತ್ಯ ಹಳೇನೆರೆಂಕಿ, ಗುರುಪ್ರಸಾದ್ ರೈ ಕೇವಳ ಮನೆ ಕುಂತೂರು, ಅಮೃತಾ ಜಯಪ್ರಕಾಶ್ ರೈ ಪೆರಾಬೆ ಪಟ್ಟೆ, ಎನ್. ಉಮೇಶ್ ದೇವಾಡಿಗ ನಾಡ್ತಿಲ ಮತ್ತು ಕ್ಷೇತ್ರದ ಅರ್ಚಕರು ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.