ಮಹಾನಗರ: ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಬ್ರಹ್ಮರಥೋತ್ಸವ ಶನಿವಾರ ಬಡಾಜೆ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು. ರಥೋತ್ಸವ ಅಂಗವಾಗಿ ಬೆಳಗ್ಗಿನಿಂದಲೇ ಶ್ರೀ ಕ್ಷೇತ್ರಕ್ಕೆ ಭಕ್ತಾದಿಗಳ ಸಂಖ್ಯೆ ಅಧಿಕವಾಗಿದ್ದು, ದೇವರ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದರು. ಬೆಳಗ್ಗೆ 10ಕ್ಕೆ ರಥಕಲಶ, 11.30ಕ್ಕೆ ಮಹಾಪೂಜೆ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಜೋಡು ದೇವರ ದೊಡ್ಡ ರಥಾರೋಹಣ ನೆರವೇರಿತು. ಈ ಅಪೂರ್ವ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. 9ಕ್ಕೆ ದೊಡ್ಡ ರಥೋತ್ಸವ, 10ಕ್ಕೆ ಮಹಾ ಪೂಜೆ, ಭೂತ ಬಲಿ, ಕವಾಟ ಬಂಧನ, ಸಂಜೆ 7ರಿಂದ ಶ್ರೀ ಶರಭೇಶ್ವರ ಕೃಷಪಾಪೋಷಿತ ಯಕ್ಷಗಾನ ಸಂಘದಿಂದ ಯಕ್ಷಗಾನ
ತಾಳಮದ್ದಳೆ ನಡೆಯಿತು.
ರಥೋತ್ಸವ ಸಂದರ್ಭ ಶರವು ಕ್ಷೇತ್ರದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಸುದೇಶ್ ಶಾಸ್ತ್ರಿ, ರಾಹುಲ್ ಶಾಸ್ತ್ರಿ, ವಿಟ್ಠಲ್ ಭಟ್, ಗಣೇಶ್ ಭಟ್ ಶರವು
ಮೊದಲಾದವರು ಉಪಸ್ಥಿತರಿದ್ದರು. ಇಂದು ಧ್ವಜಾವರೋಹಣ ಎ. 14ರಂದು ಬೆಳಗ್ಗೆ 7ರಿಂದ ಕವಾಟೋದ್ಘಾಟನೆ, ಬೆಳಗ್ಗೆ 10ಕ್ಕೆ ಓಕುಳಿ, 8.30ಕ್ಕೆ ಬಲಿ ಉತ್ಸವ, ರಥೋತ್ಸವ, ಬೆಡಿಮದ್ದು ಸುಡುವುದು (ಬೆಡಿಕಂಬ), ರಾತ್ರಿ 11.00ಕ್ಕೆ ಅವಭೃತ ಸ್ನಾನ, ಧ್ವಜಾವರೋಹಣ, ರಾತ್ರಿ 12.00ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ಸಂಜೆ 6ಕ್ಕೆ ಸಾಂಸ್ಕೃತಿಕೋತ್ಸವ ಸಭಾ ಕಾರ್ಯಕ್ರಮ, ಶರವು ರಾಮಕೃಷ್ಣ ಶಾಸ್ತ್ರಿ ಸಂಸ್ಮರಣ ಪ್ರಶಸ್ತಿ-2019 ನಡೆಯಲಿದೆ ಎಂದು ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದ್ದಾರೆ.