Home ಧಾರ್ಮಿಕ ಕಾರ್ಯಕ್ರಮ ಶರವು ಮಹಾಗಣಪತಿ ದೇಗುಲದಲ್ಲಿ ರಥೋತ್ಸವ

ಶರವು ಮಹಾಗಣಪತಿ ದೇಗುಲದಲ್ಲಿ ರಥೋತ್ಸವ

1346
1
SHARE

ಮಹಾನಗರ : ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಅಂಗವಾಗಿ ರವಿವಾರ ಬಡಾಜೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೈಭವದ ರಥೋತ್ಸವ ಸಂಪನ್ನಗೊಂಡಿತು.

ಬೆಳಗ್ಗೆ 10ಕ್ಕೆ ರಥಕಲಶ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ದೇವರ ಉತ್ಸವ ಮೂರ್ತಿ ದೇಗುಲದಿಂದ ಹೊರಬಂದು ಮಧ್ಯಾಹ್ನ 1ಗಂಟೆ ವೇಳೆಗೆ ರಥಾರೋಹಣವಾಯಿತು. ಬಳಿಕ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ, ಸುದೇಶ್‌ ಶಾಸ್ತ್ರಿ, ರಾಹುಲ್‌ ಶಾಸ್ತ್ರಿಯವರ ತೇರಿ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಮಧ್ಯಾಹ್ನ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ 8.30ಕ್ಕೆ ದೊಡ್ಡ ರಥೋತ್ಸವವಾಗಿ ಭಕ್ತರು ತೇರನ್ನೆಳೆದು ಸಂಭ್ರಮಿಸಿದರು. 10ಕ್ಕೆ ಮಹಾಪೂಜೆ, ಶ್ರೀ ಭೂತ ಬಲಿ, ಕವಾಟ ಬಂಧನ ನಡೆಯಿತು. ಶನಿವಾರ ರಾತ್ರಿ ಜೋಡುದೇವರ ಬಲಿ ಉತ್ಸವ ನೆರವೇರಿತು.

1 COMMENT

  1. ಶರವು ಮಹಾಗಣಪತಿ ದೇವಸ್ಥಾನವೆಂದು ಕರೆಯಲ್ಪಡುವ ದೇವಸ್ಥಾನದ ಪ್ರಧಾನ ದೇವರು ಮಹಾಲಿಂಗೇಶ್ವರ ದೇವರಾಗಿದ್ದು ನಂತರ ಮಧ್ವ ಮತಾಂತರದ ನಂತರ ಮಹಾಲಿಂಗೇಶ್ವರ ದೇವರ ಮಹತ್ವ ಕಡಿಮೆ ಮಾಡಿ ಗಣಪತಿ ದೇವರನ್ನು ಪ್ರಧಾನವೆಂದು ಬಿಂಬಿಸುವ ಕೆಲಸವಾಗಿದ್ದು ದೇವರ ಪೂಜೆಯಲ್ಲಿಯೂ ದ್ವಂದ್ವವನ್ನು ಅನುಸರಿಸುವುಸುವುದು ಸಾಮಾನ್ಯ ಜನರಿಗೆ ಎಷ್ಟೋ ವರ್ಷಗಳಿಂದ ಮಂಕುಬೂದಿ ಎರಚುತ್ತಿದ್ದಾರೆ. ಇಂತಹ ಕೆಲಸವೂ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಅನೇಕ ದೇವಾಲಯಗಳಲ್ಲಿ ನಡೆಯುತ್ತಿದೆ. ಅದರಲ್ಲಿ ಈಶ್ವರ ದೇವಸ್ಥಾನಗಳಲ್ಲಿ ಈಶ್ವರಣ್ಣನು ಪೂಜಿಸದೆ ಶಿವ ಲಿಂಗ ಕೆಳಗೆ ವಿಷ್ಣು ಸಾಲಿಗ್ರಾಮ ಇಟ್ಟು ಪೂಜಿಸುವ ಪದ್ದತಿಯಿದೆ. ಗರ್ಭಗುಡಿಯ ಹೊರಗೆಯ್ಯನಿಂದ ನೋಡಿವವರಿಗೆ ಇದು ತಿಳಿಯುವುದಿಲ್ಲವಾದ್ದರಿಂದ ಅದನ್ನು ಇತರರು ಯಾರು ಪ್ರಶ್ನಿಸುತ್ತಿಲ್ಲ. ಪ್ರಾಜ್ಞರು ಇದನ್ನು ಗಮನಿಸಬಹುದಾಗಿದೆ .

LEAVE A REPLY

Please enter your comment!
Please enter your name here