Home ಧಾರ್ಮಿಕ ಸುದ್ದಿ ಶರನ್ನವರಾತ್ರಿ ದಿನದ ವಿಶೇಷ ಪೂಜೆ ಆರಂಭ

ಶರನ್ನವರಾತ್ರಿ ದಿನದ ವಿಶೇಷ ಪೂಜೆ ಆರಂಭ

1023
0
SHARE

ಉಪ್ಪಿನಂಗಡಿ : ಲಕ್ಷ್ಮೀ ವೆಂಕಟರಮಣ ದೇಗುಲದಲ್ಲಿ ನವರಾತ್ರಿ ಅಂಗವಾಗಿ ಒಂಬತ್ತು ದಿನಗಳ ವಿಶೇಷ ಪೂಜೆಗೆ ಚಾಲನೆ ದೊರೆಯಿತು. ಕಾರ್ಯಕ್ರಮವು ಗೋವಾದ ಶ್ರೀ ಮಾಹಾಲಸಾ ನಾರಾಯಣಿ ದೇಗುಲದಲ್ಲಿ ಬಿಟ್ಟರೆ ಕರ್ನಾಟಕದ ಪುತ್ತೂರು ತಾ|ನ ಉಪ್ಪಿನಂಗಡಿಯಲ್ಲಿ ಮಾತ್ರ ಶ್ರೀ ಮಕರದೇವಿ ಉತ್ಸವ ನಡೆಯುತ್ತಿದೆ.

ವಿಶೇಷವೆಂದರೆ ಶ್ರೀದೇವಿಗೆ ತೊಟ್ಟಿಲು ತೂಗುವ ಸೇವೆ, ಚಾಮರ ಸೇವೆ, ಕುಂಕುಮಾರ್ಚನೆ ಅರ್ಪಿಸಲು ಭಕ್ತರು ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಬುಧವಾರ ಪಾಣೆಮಂಗಳೂರು ಶ್ರೀ ವೀರಾ ವಿಟಲ ಭಜನ ಮಂಡಳಿ ವತಿಯಿಂದ ಸತತ ಮೂರು ಕಾಲ ಭಜನೆ ಜರಗಿತು.

ಶ್ರೀ ದೇಗುಲದ ಆಡಳಿತ ಮೊಕ್ತೇಸರ ಬಿ. ಗಣೇಶ ಶೆಣೈ, ಮೊಕ್ತೇಸರ ಅನಂತರಾಮ ಕಿಣಿ, ದೇವಿದಾಸ ಭಟ್‌, ಎಂ.ಆರ್‌. ಶೆಣೈ ಹಾಗೂ ಸಮಾಜ ಬಾಂಧವರಾದ ಹರೀಶ
ಪೈ, ಗೋಕುಲದಾಸ್‌ ಭಟ್‌, ಸತೀಶ್‌ ಕಿಣಿ, ನರಸಿಂಹ ಪಡಿಯಾರ್‌, ಅಚ್ಯುತ ಪಡಿಯಾರ್‌, ಪ್ರದೀಪ್‌ ನಾಯಕ್‌ ಕೊಲ್ಲಿ, ಗಿರೀಶ ನಾಯಕ್‌, ವ್ಯವಸ್ಥಾಪಕ ರಾಮಕೃಷ್ಣ ಪ್ರಭು, ಮಂಜುನಾಥ ನಾಯಕ್‌, ಮುಖ್ಯ ಅರ್ಚಕ ಪಿ. ನರಸಿಂಹ ಭಟ್‌, ಅನಂತ ಭಟ್‌, ಸುಬ್ರಹ್ಮಣ್ಯ ಭಟ್‌, ಸಂದೀಪ್‌ ಭಟ್‌, ಗಿರೀಶ್‌ ನಾಯಕ್‌ ಕೆ. ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here