ಸುಳ್ಯ : ಶಾಂತಿನಗರ ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ಮುತ್ತಪ್ಪ ದೈವದ ನೇಮ ರವಿವಾರ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಪೈಂಗುತ್ತಿ, ಮಲೆಯರ್ಕಲ್, ಅನಂತರ ನೇಮ ನಡೆಯಿತು.
ಪ್ರಸಾದ ವಿತರಣೆ ಅನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮೊಕ್ತೇಸರ ರಾಮಕೃಷ್ಣ, ಆರಾಧನ ಸಮಿತಿ ಅಧ್ಯಕ್ಷ ಪಿ.ಎಂ. ಮಧುಸೂದನ, ಕಾರ್ಯದರ್ಶಿ ಕೆ.ಕೆ. ಬಾಲಕೃಷ್ಣ, ಉತ್ಸವ ಸಮಿತಿ ಅಧ್ಯಕ್ಷ ಎ. ಚಂದ್ರಶೇಖರ, ಸಂಚಾಲಕ ದಾಮೋದರ ಮಂಚಿ, ಆರಾಧನ ಸಮಿತಿ ಕೋಶಾಧಿಕಾರಿ ಗೌತಮ್ ಎಂ.ಸಿ., ಉತ್ಸವ ಸಮಿತಿ ಕೋಶಾಧಿಕಾರಿ ಸುಂದರ ರೈ, ಆರಾಧನ ಸಮಿತಿ ಉಪಾಧ್ಯಕ್ಷ ಗೋಪಾಲ ನಾಯ್ಕ, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಎಸ್.ಎಂ., ಜತೆ ಕಾರ್ಯದರ್ಶಿ ಹರಿಪ್ರಸಾದ, ಉತ್ಸವ ಸಮಿತಿ ಉಪಾಧ್ಯಕ್ಷ ಗಣೇಶ್ ಉಪಸ್ಥಿತರಿದ್ದರು.