Home ಧಾರ್ಮಿಕ ಸುದ್ದಿ ಶಾಂತಿಮೊಗರು ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

ಶಾಂತಿಮೊಗರು ದೇವಸ್ಥಾನ: ಪ್ರತಿಷ್ಠಾ ವಾರ್ಷಿಕೋತ್ಸವ

1695
0
SHARE

ಸವಣೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಎ. 26ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.

ವೇದಮೂರ್ತಿ ಸುದರ್ಶನ್‌ ಮಯ್ಯ, ವಿಕ್ರಮ ಎರ್ಕಡಿತ್ತಾಯ, ರಾಘವೇಂದ್ರ ಮರಡಿತ್ತಾಯ ಅವರು ವೈದಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬೆಳಗ್ಗೆ ಗಣಪತಿ ಹೋಮ, ಕಲಾಶಾಭಿಷೇಕ, ತಂಬಿಲ. ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ ನಡೆಯಿತು.

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್‌ ಕುಮಾರ್‌ ಕೆಡೆಂಜಿ, ಪ್ರಧಾನ ಅರ್ಚಕ ರಮಾನಂದ ಭಟ್, ಆನುವಂಶೀಯ ಮೊಕ್ತೇಸರ ಪ್ರವೀಣ್‌ ಕುಮಾರ್‌ ಕೆಡೆಂಜಿಗುತ್ತು, ಆಡಳಿತ ಸಮಿತಿ ಉಪಾಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್ ಬರೆಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮದನ ಪೂಜಾರಿ ಕುದ್ಮಾರು, ಜತೆ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ನಿಟ್ಟೋನಿ, ತಾರಾನಾಥ ರೈ ನಗ್ರಿ, ಐತ್ತಪ್ಪ ಗೌಡ ಕೊವೆತ್ತೋಡಿ, ಚಂದಪ್ಪ ಗೌಡ ಹಾಗೂ ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here