Home ಧಾರ್ಮಿಕ ಸುದ್ದಿ ‘ಮಹಾತ್ಮರ ಜೀವನ ಸಾಧಕರ ಬದುಕಿಗೆ ಪ್ರೇರಣೆ’

‘ಮಹಾತ್ಮರ ಜೀವನ ಸಾಧಕರ ಬದುಕಿಗೆ ಪ್ರೇರಣೆ’

ಬಾಳೆಕುದ್ರು ಶ್ರೀಮಠ: ಶಂಕರ ಜಯಂತಿ ಆಚರಣೆ

1756
0
SHARE
ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಶಂಕರ ಜಯಂತಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಕೋಟ: ಮಹಾತ್ಮರ ಜಯಂತಿ ಆಚರಿಸುವ ಮೂಲಕ ಅವರ ಜೀವನ ಚಿತ್ರಣ ಪರಿಚಯಿಸಿ, ಅದು ಸಾಧಕನ ಬದುಕಿಗೆ ಪ್ರೇರಣೆಯಾಗಬೇಕು ಎಂದು ವಿದ್ವಾನ್‌ ಎಲ್‌. ವಾಸುದೇವ ಭಟ್‌ ಹಂದಲಸು ಹೇಳಿದರು. ಅವರು ಬಾಳೆಕುದ್ರು ಶ್ರೀಮಠದಲ್ಲಿ ಎ.20ರಂದು ಶ್ರೀ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಬಾಳೆಕುದ್ರು ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ, ಶಂಕರಾಚಾರ್ಯರು ಮಹಾನ್‌ ಧಾರ್ಮಿಕ ಚೇತನ ಹಾಗೂ ಈಶ್ವರನ ಅವತಾರ. ಹಿಂದೂ ಧರ್ಮದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದರು.

ಈ ಸಂದರ್ಭ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ಶ್ರೀಮಠದ ವತಿಯಿಂದ ಸಹಾಯಧನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಶಂಕರಾಚಾರ್ಯರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು.

ಬೆಳ್ತಂಗಡಿ ತುಳು ಶಿವಳ್ಳಿ ಬ್ರಾಹ್ಮಣ ಸಭಾ ಅಧ್ಯಕ್ಷ ರಾಘವೇಂದ್ರ ಬೈಪಡಿತ್ತಾಯ, ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಂಭು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಂಕರ ಜಯಂತಿ ಸಮಿತಿಯ ಅಧ್ಯಕ್ಷ ಡಾ| ಯಾಜಿ ನಿರಂಜನ್‌ ಭಟ್‌ ಸ್ವಾಗತಿಸಿ, ದೈ. ಶಿ. ಶಿಕ್ಷಕ ಶ್ರೀಕಾಂತ್‌ ಸಾಮಂತ್‌ ನಿರೂಪಿಸಿದರು.

ಮಹಾತ್ಮರ ನೆನಪು ಸದಾ ಹಸಿರು
ಸನಾತನ ಧರ್ಮದ ಮೇಲಿನ ದಾಳಿ ತಡೆಯುವ ನಿಟ್ಟಿನಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರ. ಆದ್ದರಿಂದ ಇಂತಹ ಮಹಾತ್ಮರ ನೆನಪು ನಮ್ಮೊಳಗೆ ಸದಾ ಹಸಿರಾಗಿರಬೇಕು.
– ವಾಸುದೇವ ಭಟ್‌

LEAVE A REPLY

Please enter your comment!
Please enter your name here