Home ಧಾರ್ಮಿಕ ಸುದ್ದಿ ಶಂಭೂರು: ಪ್ರತಿಷ್ಠಾ ಮಹೋತ್ಸವ

ಶಂಭೂರು: ಪ್ರತಿಷ್ಠಾ ಮಹೋತ್ಸವ

629
0
SHARE

ಬಂಟ್ವಾಳ : ಬದುಕಿಗೆ ಆತ್ಮವಿಶ್ವಾಸ ಸಿಗುವುದು ಧಾರ್ಮಿಕ ಕೇಂದ್ರಗಳ ಮೂಲಕ, ಧಾರ್ಮಿಕ ಕೇಂದ್ರಗಳು ಉಳಿದಿರುವುದು ಬೆಳೆದಿರುವುದು ತುಳು ಭಾಷೆಯ ಮೂಲಕ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಮೇ 13ರಂದು ಶಂಭೂರು ಗ್ರಾಮದ ಕೊಪ್ಪಳ, ಕೊದಂಟಿಯಡ್ಕ ಧೂಮಾವತಿ ಬಂಟ ಸಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ತುಳು ಭಾಷೆ ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ ಜಾನಪದದಲ್ಲಿ ಜಿಲ್ಲೆಯ ಜೀವನಶೈಲಿ ಅಡಗಿದೆ. ತುಳು ಭಾಷೆಗೂ ಜಾನಪದಕ್ಕೂ ಅವಿನಾಭಾವ ಸಂಬಂಧ ಇದೆ. ತುಳು ಭಾಷೆಯ ಮೂಲಕ ಜಿಲ್ಲೆಯ ಧರ್ಮ ಉಳಿದಿದೆ. ತುಳು ಭಾಷೆಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಪ್ರತಿ ತಾಯಂದಿರು ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಳನೀರು ಅನಂತ ಭಟ್ ತಂತ್ರಿಗಳ ಪೌರೋಹಿತ್ಯ ನೇರವೇರಿಸಿದರು. ಕರ್ನಾಟಕ ರಾಜ್ಯ ಸಂಸ್ಕಾರ ಭಾರತಿ ಲೋಕ ಕಲಾ ವಿಭಾಗ ಪ್ರಮುಖ್‌ ದಯಾನಂದ ಜಿ. ಕತ್ತಲಸಾರ್‌ ಧಾರ್ಮಿಕ ಉಪನ್ಯಾಸ ನೀಡಿದರು.

ಸಮ್ಮಾನ

ದೇವಸ್ಥಾನದ ಜೀಣೊìೕದ್ಧಾರಕ್ಕೆ ಶ್ರಮಿಸಿದ ದಾನಿಗಳನ್ನು, ಕಟ್ಟಡ ನಿರ್ಮಾಣ ಮಾಡಿದವರನ್ನು ಸಮ್ಮಾನಿಸಲಾಯಿತು.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಆರ್‌.ಎಸ್‌.ಎಸ್‌.ಪ್ರಮುಖ ಕಲ್ಲಡ್ಕ ಡಾ| ಪ್ರಭಾಕರ ಭಟ್ ಹಾಗೂ ಸಮಿತಿಯ ಪ್ರಮುಖರು, ಗೌರವ ಸಲಹೆಗಾರರಾದ ಗುತ್ತಿನ ಮನೆಯವರು, ದಕ್ಷಿಣದ ಶಿರ್ಡಿ ಸಾಯಿಬಾಬಾ ಮಂದಿರದ ಅಧ್ಯಕ್ಷ ಸೂರಜ್‌ ಕುಮಾರ್‌ ಶಂಭೂರು, ಬೊಂಡಾಲ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಉದ್ಯಮಿಗಳಾದ ರಘು ಸಪಲ್ಯ, ಪ್ರವೀಣ್‌ ಕುಮಾರ್‌, ಪದ್ಮನಾಭ ಮಯ್ಯ, ಶರತ್‌ ಶೆಟ್ಟಿ ಕಕ್ಕೆಮಜಲು, ನವೀನ್‌ ಶೆಟ್ಟಿ, ಜಗನ್ನಾಥ್‌ ಶೆಟ್ಟಿ, ಪ್ರಶಾಂತ್‌ ಕೊಪ್ಪಳ, ರಾಜೇಶ್‌ ಜೀವಿತ ಕುಲಾಲ್ ಮುಂಬಯಿ ಹಾಗೂ ಸಮಿತಿ ಕಾರ್ಯದರ್ಶಿ ಕೇಶವ ಬರ್ಕೆ, ಉಪಾಧ್ಯಕ್ಷರಾದ ಪ್ರಶಾಂತ್‌ ಕೊಪ್ಪಳ, ರಾಜೇಶ್‌ ಶೇಡಿಗುರಿ, ನೋಣಯ್ಯ ರೆಂಜಮಾರು, ಗಣೇಶ್‌ ಪ್ರಸಾದ್‌ ಭಂಡಾರದ ಮನೆ, ನಿರಂಜನ ಕೊಲ್ಲೂರು, ಕೋಶಾಧಿಕಾರಿ ಭೋಜರಾಜ್‌ ಕೊಪ್ಪಳ, ಜತೆ ಕಾರ್ಯದರ್ಶಿ ಗಳಾದ ರಾಮಚಂದ್ರ ಪದೆಂಜಿಮಾರ್‌, ದಿನೇಶ್‌ ರವುಲುಮಜಲ್, ತೇಜಸ್‌ ಬರ್ಕೆ, ದಯಾನಂದ ಅಡೆಪಿಲ, ಸತೀಶ್‌ ಕೊಪ್ಪಳ ಹಾಗೂ ಊರಿನ ಭಕ್ತರು ಮತ್ತಿತರರು ಉಪಸ್ಥಿತರಿದ್ದರು.

ಜೀಣೊìೕದ್ಧಾರ ಸಮಿತಿ ಅಧ್ಯಕ್ಷ ಆನಂದ ಎ. ಶಂಭೂರು ಪ್ರಸ್ತಾವಿಸಿ, ಸ್ವಾಗತಿಸಿದರು.

ಕೇಶವ ಬರ್ಕೆ ವಂದಿಸಿ, ಜಿನ್ನಪ್ಪ ಕುದ್ರೆಬೆಟ್ಟು ಅವರು ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮಗಳು ತುಳು ಭಾಷೆಯ ಮೂಲಕ ನಡೆಯಲಿ. ಇತ್ತೀಚಿನ ದಿನಗಳಲ್ಲಿ ಶ್ರದ್ಧಾಕೇಂದ್ರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.ಧಾರ್ಮಿಕ ಕೇಂದ್ರಗಳ ಬೆಳವಣಿಗೆಗೆ ಒಗ್ಗಟ್ಟಿನ ಕೆಲಸ ಮಾಡೋಣ. ಮೂಲನಂಬಿಕೆ ಗಟ್ಟಿಯಾಗಲು ತಿಳಿವಳಿಕೆಯ ಜ್ಞಾನವನ್ನು ವೃದ್ಧಿಸಬೇಕು. ನಾಲಿಗೆಯಲ್ಲಿ ಸಂಪತ್ತು ಆಪತ್ತುಗಳೆರಡೂ ಉಂಟು. ಮಾತು ಮುತ್ತಿನಂತೆ ಇರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಧಾರ್ಮಿಕ ಕೇಂದ್ರಗಳ ಬೆಳವಣಿಗೆಗೆ ಒಗ್ಗಟ್ಟಿನ ಕೆಲಸ ಮಾಡೋಣ
ಧಾರ್ಮಿಕ ಕಾರ್ಯಕ್ರಮಗಳು ತುಳು ಭಾಷೆಯ ಮೂಲಕ ನಡೆಯಲಿ. ಇತ್ತೀಚಿನ ದಿನಗಳಲ್ಲಿ ಶ್ರದ್ಧಾಕೇಂದ್ರ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.ಧಾರ್ಮಿಕ ಕೇಂದ್ರಗಳ ಬೆಳವಣಿಗೆಗೆ ಒಗ್ಗಟ್ಟಿನ ಕೆಲಸ ಮಾಡೋಣ. ಮೂಲನಂಬಿಕೆ ಗಟ್ಟಿಯಾಗಲು ತಿಳಿವಳಿಕೆಯ ಜ್ಞಾನವನ್ನು ವೃದ್ಧಿಸಬೇಕು. ನಾಲಿಗೆಯಲ್ಲಿ ಸಂಪತ್ತು ಆಪತ್ತುಗಳೆರಡೂ ಉಂಟು. ಮಾತು ಮುತ್ತಿನಂತೆ ಇರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

LEAVE A REPLY

Please enter your comment!
Please enter your name here