Home ಧಾರ್ಮಿಕ ಕಾರ್ಯಕ್ರಮ ಶಾಕಲಾ ಋಕ್ಸಂಹಿತಾ ಯಾಗ ಸಂಪನ್ನ

ಶಾಕಲಾ ಋಕ್ಸಂಹಿತಾ ಯಾಗ ಸಂಪನ್ನ

1208
0
SHARE

ಕುಂದಾಪುರ: ಲೋಕ ಕಲ್ಯಾಣಾರ್ಥವಾಗಿ ಬಡಾಕೆರೆ-ನಾವುಂದದಲ್ಲಿ ಫೆ. 19ರಿಂದ ನಡೆಯುತ್ತಿರುವ ಶಾಕಲಾ ಋಕ್ಸಂಹಿತಾ ಯಾಗ ಮತ್ತು ಚತುರ್ವೇದ ಪಾರಾಯಣ ಸಮಾರೋಪ ಹಾಗೂ ಪೂರ್ಣಾಹುತಿ ಫೆ. 24ರಂದು ಸಂಪನ್ನಗೊಂಡಿತು.

ಭಗವಾನ್‌ ಶ್ರೀ ಶಂಕರಾಚಾರ್ಯರು ಪ್ರಕೃತಿಯಲ್ಲಿ ಜೀವಿಸುವ ಮಾನವ ಹಾಗೂ ಸಮಸ್ತ ಜಲಚರಗಳ ದೋಷ ನಿವಾರಣೆ ಮತ್ತು ಯಶಸ್ಸು ಸಂಪಾದಿಸಲು ಸಂಹಿತಾ, ಗಣ, ಕೂಷ್ಮಾಂಡ, ಪಾವಮಾನ್ಯಾದಿಗಳ ಜಪ ಮತ್ತು ಹವನ ಆದೇಶಿಸಿದ್ದು, ಅಥರ್ವ ಶಾಖೆಗಳ ಪಾರಾಯಣ ಅಗ್ನಿಮಾನ್‌ ತಲಾರೆ ವಾಮನ ಭಟ್‌ ನೇತೃತ್ವದಲ್ಲಿ ಬಿ.ಕೆ. ಲಕ್ಷ್ಮೀನಾರಾಯಣ ಭಟ್‌ ಆಚಾರ್ಯತ್ವದಲ್ಲಿ ನಾಗಯಕ್ಷಿ ಪಾತ್ರಿಗಳಾದ ವೇ| ಮೂ| ಲೋಕೇಶ ಅಡಿಗ ಹಾಗೂ ಹಲವು ವಿದ್ವಾಂಸರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಶಾಂತಾ ಮಾಧವ ಅಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here