Home ಧಾರ್ಮಿಕ ಸುದ್ದಿ ಶಬರಿನಗರ: ಸ್ವಾಮಿ ಕೊರಗಜ್ಜ, ಗುಳಿಗ ದೈವಗಳ ನೇಮ ಸಂಪನ್ನ

ಶಬರಿನಗರ: ಸ್ವಾಮಿ ಕೊರಗಜ್ಜ, ಗುಳಿಗ ದೈವಗಳ ನೇಮ ಸಂಪನ್ನ

1133
0
SHARE

ಸುಳ್ಯ ಪದವು : ಶಬರಿನಗರ ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವಗಳ ಎರಡು ದಿನಗಳ ನೇಮ ಸಂಪನ್ನಗೊಂಡಿತ್ತು.

ಮಾ. 11ರಂದು ಬೆಳಗ್ಗೆ ಗಣಪತಿ ಹೋಮ, ಅನಂತರ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಸತ್ಯನಾರಾಯಣ ಪುಣ್ಚಿತ್ತಾಯ ಇವರ ಹಾಡುಗಾರಿಕೆಯಲ್ಲಿ ಸುಳ್ಯಪದವು ಚಂದ್ರಶೇಖರ್‌ ಸಂಯೋಜನೆಯಲ್ಲಿ ಯಕ್ಷ-ಗಾನ -ವೈಭವ ನಡೆಯಿತು. ಮಧ್ಯಾಹ್ನ ನೂರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಗುಳಿಗ ದೈವದ ನೇಮ, ನಂತರ ಕಲ್ಲಡ್ಕ ವಿಠಲ ನಾಯಕ್‌ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ, ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ, ಅನಂತರ ಕೊರಗ ತನಿಯ ದೈವದ ಭಂಡಾರ ತೆಗೆದು ನೇಮ, ಮಾ. 12ರಂದು ಪ್ರಸಾದ ವಿತರಣೆ ನಡೆಯಿತು.

ತಾ.ಪಂ. ಸದಸ್ಯ ರಾಧಾಕೃಷ್ಣ ಬೋರ್ಕರ್‌, ಪಡುಮಲೆ ಕೋಟಿ-ಚೆನ್ನಯ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಬಡಗನ್ನೂರು ಗ್ರಾ.ಪಂ. ಸದಸ್ಯ ಗೋಪಾಲಕೃಷ್ಣ, ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬೆಳಿಯಪ್ಪ ಗೌಡ, ಕಾರ್ಯಕಾರಿ ಸಮಿತಿಯ ಸದಸ್ಯರು, ಊರ-ಪರವೂರ ಸಾವಿರಾರು ಭಕ್ತರು ನೇಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here