ಪುಂಜಾಲಕಟ್ಟೆ : ದೇವರ ಮೇಲೆ ನಿರಂತರ ಭಕ್ತಿ ಮತ್ತು ಶ್ರದ್ಧೆ ಇದ್ದಾಗ ಸ್ವಾರ್ಥ ಚಿಂತನೆ ಹಾಗೂ ಸಂಕುಚಿತ ಮನೋಭಾವನೆ ಯಿಂದ ಹೊರಬರಲು ಸಾಧ್ಯವಾಗುತ್ತದೆ. ಜೀವನದಲ್ಲಿ ಉತ್ತಮ ಚಿಂತನೆಗಳು ಶಾಶ್ವತ ವಾಗಿರಬೇಕು. ಆರಾಧನ ಕೇಂದ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಪುಣ್ಯ ಸಂಚಯವಾಗುತ್ತದೆ ಎಂದು ಹೊಸ್ಮಾರು ಬಲೊಟ್ಟು ಆಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಬಂಟ್ವಾಳ ತಾ| ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಶ್ರೀ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಮತ್ತು ಕಲ್ಕುಡ-ಕಲ್ಲುರ್ಟಿ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ನೇಮದ ಪ್ರಯುಕ್ತ ರವಿವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಗ್ರಾಮದ ಸುಭಿಕ್ಷೆಗೆ ದೈವ, ದೇವರ ಅನುಗ್ರಹ ಮುಖ್ಯ. ದೈವಸ್ಥಾನ, ದೇವ ಸ್ಥಾನ ಮೊದಲಾದ ಆರಾಧನ ಕೇಂದ್ರ ಗಳಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ತೊಡಗಿಸಿ ಕೊಳ್ಳುವುದರಿಂದ ಯಾವುದೇ ಕಾರ್ಯಕ್ರಮ ಗಳು ಯಶಸ್ವಿಯಾಗುತ್ತದೆ. ಇದರಿಂದ ಗ್ರಾಮದ ಅಭಿವೃದ್ಧಿಯಾಗಿ ಸಮೃದ್ಧಿಗೊ ಳ್ಳುತ್ತದೆ ಎಂದು ಅವರು ಹೇಳಿದರು.
ಜನಜಾಗೃತಿ ವೇದಿಕೆ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಕಾರಂತ, ಉದ್ಯಮಿ ಡಾ| ವರದರಾಜ ಪೈ ಮಾವಿನಕಟ್ಟೆ, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ ವಿಜಯನಗರ, ಮುಂಬಯಿಯ ಉದ್ಯಮಿಗಳಾದ ಗಣೇಶ್ ಶೆಟ್ಟಿ ಕಂಚಾರು, ಸುರೇಶ್ ಶೆಟ್ಟಿ ನಂದಿಲ, ಉದ್ಯಮಿ ಸಂದೀಪ್ ಶೆಟ್ಟಿ ವಾಮದಪದವು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಷ್ಠಶಿಲ್ಪಿ ಬಾಲಕೃಷ್ಣ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.
ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ರಾಜೇಂದ್ರ ಶೆಟ್ಟಿ, ಮತ್ತು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಉದ್ಯಮಿ ವಿನಾಯಕ ಪ್ರಭು ಆಲದಪದವು, ಗೌರವ ಸಲಹೆಗಾರರಾದ ರಘುನಾಥ ಪೈ ಮಾವಿನಕಟ್ಟೆ, ಯುವರಾಜ ಆಳ್ವ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ,ಉತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಶೆಟ್ಟಿ ಕಂಚಾರು, ಅಧ್ಯಕ್ಷ ಕಾಂತಪ್ಪ ಶೆಟ್ಟಿ ಪಡೊÉಟ್ಟು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಯೋಗೀಶ್ ಪ್ರಭು ಆಲದಪದವು, ಉಮೇಶ್ ಕೋಟ್ಯಾನ್ ಪಿಲಿಮೊಗರು, ಉಷಾ ಇಂದುಶೇಖರ್ ಚೆನ್ನೈತ್ತೋಡಿ, ಕೃಷ್ಣ ಶೆಟ್ಟಿ ದಾರಂಪಾಲು, ಕೃಷ್ಣ ನಾಯಕ್ ಬಸ್ತಿಕೋಡಿ, ನಳಿನಿ ಆನಂದ ಮೂಲ್ಯ ಪಚ್ಚೇರು ಸಮಿತಿಗಳ ಪದಾಧಿಕಾರಿ, ಸದಸ್ಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬ್ರಹ್ಮ ಕಲಶೋತ್ಸವ ಸಮಿತಿ ಕಾರ್ಯ ದರ್ಶಿ ಮಾಧವ ಪೂಜಾರಿ ಕುಲ್ಲಾಲ್ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಪ್ರವೀಣ್ ಗಟ್ಟಿ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.