ಪುಂಜಾಲಕಟ್ಟೆ: ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವ್ಯವಸ್ಥಾಪನ ಸಮಿತಿ ಮತ್ತು ಗ್ರಾಮಸ್ಥರ ವತಿಯಿಂದ ಶ್ರೀ ಕಾರಿಂಜೇಶ್ವರ ದೇವರಿಗೆ ಸೀಯಾಳ ಅಭಿಷೇಕ ಸೋಮವಾರ ಜರಗಿತು.
ಕ್ಷೇತ್ರದ ಅರ್ಚಕ ಮಿಥುನ್ ನಾವಡ ಅವರ ನೇತೃತ್ವದಲ್ಲಿ ಜಯಶಂಕರ ಉಪಾಧ್ಯಾಯ ಅವರ ಸಹಕಾರದಲ್ಲಿ ಸೀಯಾಳ ಅಭಿಷೇಕ ನಡೆಸಿ ಮಳೆಗಾಗಿ ಪ್ರಾರ್ಥನೆ ನಡೆಸಲಾಯಿತು.
ಎರಡೂವರೆ ಸಾವಿರದಷ್ಟು ಸೀಯಾಳ
ಸುಮಾರು ಎರಡೂವರೆ ಸಾವಿರದಷ್ಟು ಸೀಯಾಳದ ಅಭಿಷೇಕ ನಡೆಯಿತು. ರವಿವಾರ ರಾತ್ರಿ ಮತ್ತು ಸೋಮವಾರ ಮುಂಜಾನೆ ಕಾರಿಂಜ ಪರಿಸರದಲ್ಲಿ ಮಳೆಯಾಗಿದ್ದು, ಮಳೆಗಾಗಿ ಶ್ರೀ ದೇವರಿಗೆ ಸಂಕಲ್ಪಿಸಿದ ಪ್ರಾರ್ಥನೆ ಫಲಪ್ರದವಾಗಿದ್ದು, ಸಂತಸ ತಂದಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ ಅವರು ತಿಳಿಸಿದ್ದಾರೆ.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್, ಯು. ಸದಾಶಿವ ಪ್ರಭು, ಟಿ. ಕೃಷ್ಣಪ್ಪ ಗೌಡ, ಪಿ. ವಿಶ್ವನಾಥ ಪೂಜಾರಿ, ವೆಂಕಪ್ಪ ನಾಯ್ಕ, ಪಿ. ಸುಜಲ ಶೆಟ್ಟಿ, ಸವಿತಾ, ಮೆನೇಜರ್ ಸತೀಶ್ ಪ್ರಭು, ಗ್ರಾ.ಪಂ. ಸದಸ್ಯ ಮೋಹನ ಆಚಾರ್ಯ, ಮತ್ತು ಸಿಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.