ವಿಟ್ಲ : ನಾಗಾರಾಧನೆಯ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಪ್ರಕೃತಿ ಯನ್ನು ಸ್ವಾರ್ಥಕ್ಕೆ ಬಲಿ ಪಡೆದಾಗ ಪ್ರಕೃತಿ ಕೋಪಗಳು ಉಂಟಾಗುತ್ತವೆ. ಪ್ರಕೃತಿ-ಧರ್ಮಕ್ಕೆ ಧಕ್ಕೆಯಾಗದಂತೆ ಮಾಡುವ ಅರಿವು ಮನುಷ್ಯನಿಗೆ ಇರಬೇಕು. ಪ್ರಕೃತಿಯನ್ನು ಉಳಿಸಿದಾಗ ಮನುಷ್ಯ ಬದುಕಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಬುಧವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವದ ಪ್ರಯುಕ್ತ ವಿಶೇಷ ಸಂದೇಶ ನೀಡಿ, ಧರ್ಮ ಸೇನಾನಿಯಾಗುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ನಾಗರ ಪಂಚಮಿ ಪ್ರೇರಣೆಯಾಗಲಿ ಎಂದರು.
ಸಾಧ್ವಿ ಮಾತಾನಂದಮು ಉಪಸ್ಥಿತರಿ ದ್ದರು. ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ನೇತೃತ್ವದಲ್ಲಿ ಸ್ವಯಂಭೂ ನಾಗಸನ್ನಿಧಿಯಲ್ಲಿ ನಾಗತಂಬಿಲ, ಪಂಚಾ ಮೃತ ಅಭಿಷೇಕ, ಆಶ್ಲೇಷ ಬಲಿಪೂಜೆ ನಡೆಯಿತು. ನಿಡ್ಲೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ “ಮಹರ್ಷಿ ವಾಲ್ಮೀಕಿ’ ಬಯಲಾಟ ಪ್ರದರ್ಶನಗೊಂಡಿತು.