ಬೆಳ್ತಂಗಡಿ : ನಮ್ಮ ಸಂಸ್ಕೃತಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಅಶಾಂತಿ ನಿವಾರಿಸುವ ಸನಾತನ ಹಿಂದೂ ಧರ್ಮ ಪ್ರಪಂಚಕ್ಕೆ ವಿಸ್ತರಿಸಬೇಕಾದರೆ ದೇಶದಲ್ಲಿ ಈ ಧರ್ಮ ಭದ್ರವಾಗಿಸಬೇಕು. ಅದಕ್ಕಾಗಿ ಧರ್ಮವನ್ನು ಮತ್ತು ನಮ್ಮ ಸಂಸ್ಕಾರ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು ಎಂದು ಸುಬ್ರಹ್ಮಣ್ಯ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಶ್ರೀಗಳು ತಿಳಿಸಿದರು.
ಅವರು ರವಿವಾರ ರಾತ್ರಿ ಬಳಂಜ ಶ್ರೀ ಪಂಚಲಿಂಗೇಶ್ವರ- ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆ ಪ್ರಯುಕ್ತ ಉದಯ ವರ್ಮ ಪಡಿವಾಳ್ ವೇದಿಕೆಯಲ್ಲಿ ಹಮ್ಮಿ ಕೊಂಡಿದ್ದ ವಿರಾಟ್ ಸಂತ ಸಮಾಗಮದಲ್ಲಿ ಆಶೀರ್ವ ಚನ ನೀಡಿ, ಹಿಂದೂ ಧರ್ಮದಲ್ಲಿ ಅದ್ಭುºತ ಸಂಪತ್ತಿದೆ. ಅದರ ಮಹತ್ವ ತಿಳಿಯದೆ ವಿದೇಶಿ ಸಂಸ್ಕೃತಿ ಬೇಡುವ ಸ್ಥಿತಿ ಬಂದಿದೆ ಎಂದರು.
ಕೀಳರಿಮೆ ಬೇಡ
ಮೂಡಬಿದಿರೆ ಶ್ರೀ ದಿಗಂಬರ ಜೈನ ಮಠದ ಭಾರತಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚಿಸಿ, ಹಿಂದೂ ಸಮಾಜ ಮತ್ತು ಜೈನ ಸಮುದಾಯವನ್ನು ಉಭಯ ಜಿಲ್ಲೆಗಳಲ್ಲಿ ಪ್ರತ್ಯೇಕಿಸಲು ಯಾರಿಂದಲೂ ಸಾಧ್ಯವಿಲ್ಲ. ಅನೇಕ ಸಂಸ್ಕೃತಿಗಳನ್ನು ಒಳ ಗೊಂಡ ಸನಾತನ ಸಂಸ್ಕೃತಿಯ ಹಿಂದೂ ಧರ್ಮದ ಬಗ್ಗೆ ಕೀಳರಿಮೆ ಬೇಡ. ನಮ್ಮ ಸಂಸ್ಕೃತಿ ದೇಶಕ್ಕೆ ಸೀಮಿತವಾಗದೇ ವಿದೇಶಕ್ಕೂ ಹರಡಬೇಕು. ಅದಕ್ಕಾಗಿ ಸ್ವಾಮೀಜಿಗಳು ವಿದೇಶ ಯಾತ್ರೆ ಮಾಡುವುದು ತಪ್ಪಲ್ಲ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಶಾಂತಿ- ಸೌಹಾರ್ದ ಬೆಳೆಯಲು ಗ್ರಾಮಕ್ಕೊಂದು ಮಠ, ದೇವಸ್ಥಾನ ನಿರ್ಮಾಣವಾಗಬೇಕು ಎಂದರು.
ಭಜನೆ, ಸಂಕೀರ್ತನೆ ನಿರಂತರವಾಗಲಿ
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚಿಸಿ, ಸೌಹಾರ್ದದ ಬದುಕು ನಿರ್ಮಾಣಗೊಳ್ಳಲು ಮನೆ ಮನೆಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಭಜನೆ, ಹರಿನಾಮ ಸಂಕೀರ್ತನೆ ನಿರಂತರ ನಡೆಯಬೇಕು ಎಂದರು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಲೊÂಟ್ಟ ಶ್ರೀ ಗುರುಸೇವಾಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲ ಮಾತನಾಡಿದರು.
ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್ ಬಳಂಜ ಗುತ್ತು, ಉತಸ್ವ ಸಮಿತಿ ಅಧ್ಯಕ್ಷ ಅರುಣ್ ಹೆಗ್ಡೆ ಕುಳೆಂಜಿರೋಡಿಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರªಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಉಪಸ್ಥಿತರಿದ್ದರು. ವಿರಾಟ್ ಸಂತ ಸಮಾಗಮದ ಸಂಚಾಲಕ ಅಶ್ವತ್ಥ್ ಹೆಗ್ಡೆ ಸ್ವಾಗತಿಸಿ, ವಂದಿಸಿದರು. ಪ್ರಕಾಶ್ ಶೆಟ್ಟಿ ನೊಚ್ಚ ನಿರೂಪಿಸಿದರು.
ಧರ್ಮ ಸಂಸ್ಕೃತಿ ವೃದ್ಧಿ
ಅಳದಂಗಡಿ ಅಜಿಲರಸರ ಸೀಮೆಯಲ್ಲಿ ಹಲವಾರು ದೇವಸ್ಥಾನಗಳು, ದೈವಸ್ಥಾನಗಳು ಜೀರ್ಣೋದ್ಧಾರಗೊಂಡಿದ್ದು, ಸ್ವಾಮೀಜಿಗಳು ಆಶೀರ್ವಚನ ನೀಡಿ ಧರ್ಮ ಸಂಸ್ಕೃತಿಯನ್ನು ಬೆಳೆಸಿದ್ದಾರೆ.
– ಡಾ| ಪದ್ಮಪ್ರಸಾದ್ ಅಜಿಲ ಅಳದಂಗಡಿ ಅರಮನೆ ತಿಮ್ಮಣ್ಣರಸರು
ಮೂಢನಂಬಿಕೆ ತೊಲಗಲಿ
ಕುಂದಾಪುರ ಬಾರಕೂರು ಮಹಾ ಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚಿಸಿ, ಹಣ ಮಾಡುವ ಉದ್ದೇಶದಿಂದ ದೈವಸ್ಥಾನಕ್ಕೆ ಬ್ರಹ್ಮಕಲಶ ಮಾಡುವ ವ್ಯಾಪಾರ ಪದ್ಧತಿ ಹೆಚ್ಚಾಗಿದೆ. ಇದು ನಿಂತಾಗ ದೈವಾರಾಧನೆ ಮಹತ್ವ ಹೆಚ್ಚಾಗುತ್ತದೆ. ಹಿಂದೂಗಳು ಭದ್ರ ವಾಗಬೇಕಾರೆ ಮೂಢನಂಬಿಕೆ ತೊಲಗ ಬೇಕು. ಹಿಂದೂಗಳು ಧರ್ಮಕ್ಕಾಗಿ ಒಗ್ಗಟ್ಟಾಗ ಬೇಕು ಎಂದರು.