ಸವಣೂರು : ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣ, ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸ ವದ ಸಲುವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ಒಕ್ಕೂಟ ಹಾಗೂ ಕ್ಷೇತ್ರದ ಭಕ್ತರಿಂದ ರವಿವಾರ ಶ್ರಮದಾನ ನಡೆಯಿತು.
ದೇವಸ್ಥಾನದಲ್ಲಿ ಫೆ. 2ರಿಂದ 7ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಜೀರ್ಣೋದ್ಧಾರ ಕಾರ್ಯಗಳು ವೇಗ ಪಡೆದುಕೊಂಡಿವೆ. ಹಲವು ಭಕ್ತರು ನಿತ್ಯ ಸ್ವಯಂ ಸೇವಕರಾಗಿ ಪಾಲ್ಗೊಂಡು ಶ್ರಮದಾನ ಮಾಡುತ್ತಿದ್ದಾರೆ.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಗಿ ಸವಣೂರು ಕೆ. ಸೀತಾರಾಮ ರೈ, ಗೌರವಾಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲು, ಪ್ರಕಾಶ್ ಕುಮಾರ್ ಆರಿಗ ಬಂಬಿಲಗುತ್ತು, ಶಾಸಕ ಎಸ್. ಅಂಗಾರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ನೆಲ್ತಿಲ ರವೀಂದ್ರನಾಥ ರೈ , ಆಡಳಿತ ಮೊಕ್ತೇಸರರು, ಸಂಚಾಲಕರು, ಸದಸ್ಯರು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.