ಸವಣೂರುಫೆ: ಬ್ರಹ್ಮಕಲಶೊತ್ಸವ ನಡೆದ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ. 7ರಂದು ರಾತ್ರಿ ವರ್ಷಾವಧಿ ಉತ್ಸವ ನಡೆಯಿತು.
ವರ್ಷಾವಧಿ ಉತ್ಸವದ ಅಂಗವಾಗಿ ರಾತ್ರಿ ರಂಗ ಪೂಜೆ, ಭೂತ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ರತ್ನಾಕರ ಶೆಟ್ಟಿ ಸವಣೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ಸದಸ್ಯರಾದ ಗೋಪಾಲಕೃಷ್ಣ ಬಡೆಕಿಲ್ಲಾಯ, ಶಿವರಾಮ ರೈ ಸವಣೂರುಗುತ್ತು, ಶ್ರೀಲತಾ ಎಂ. ಶೆಟ್ಟಿ ಸವಣೂರುಗುತ್ತು, ಮೋಹನದಾಸ ಶೆಟ್ಟಿ ಸವಣೂರುಗುತ್ತು, ಪ್ರಸನ್ನ ರೈ ಸವಣೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಆರಿಗ ಬಂಬಿಲಗುತ್ತು, ಉಪಾಧ್ಯಕ್ಷ ನಡುಮನೆ ಸುಂದರ ರೈ ಸವಣೂರು, ಶ್ರೀ ಅಜಿಲಾಡಿಬೀಡು ಸದಾಶಿವ ರೈ, ಶ್ರೀ ಅರಿಯಡ್ಕ ಮಹಿಳಾನಾಥ ಶೆಟ್ಟಿ, ಡಾ| ಜಯರಾಮ ರೈ ಪನ್ನೆ, ಶ್ರೀ ರಮಾನಂದ ಶೆಟ್ಟಿ ಕೊಯಮುತ್ತೂರು, ಪ್ರಧಾನ ಕಾರ್ಯದರ್ಶಿ ನೆಲ್ತಿಲ ರವೀಂದ್ರನಾಥ ರೈ ನೋಲ್ಮೆ, ಜತೆ ಕಾರ್ಯದರ್ಶಿ ಸುನಿಲ್ ರೈ ಪುಡ್ಕಜೆ, ಕೋಶಾಧಿಕಾರಿ ಬೆಳಿಯಪ್ಪ ಗೌಡ ಚೌಕಿಮಠ, ರಾಘವ ಗೌಡ ಸವಣೂರು, ಸದಸ್ಯರಾದ ಡಾ| ರಮೇಶ್ ಶೆಟ್ಟಿ ಸವಣೂರು ಗುತ್ತು, ಮೈಸೂರು, ಚಂದ್ರಹಾಸ ಆಳ್ವ ಸವಣೂರುಗುತ್ತು, ಸೀತಾರಾಮ ರೈ ಸವಣೂರುಗುತ್ತು, ಕುಂಜಾಡಿ ಪ್ರಕಾಶ್ಚಂದ್ರ ರೈ, ವಿಜಯ ಶೇನವ ಆರುವಾರ ಕೊೖಲ, ಶಿವಪ್ರಸಾದ್ ಶೆಟ್ಟಿ ಕಿನಾರ ಕೆಡೆಂಜಿ, ಪ್ರಮೋದ್ ಕೆ.ಆರ್. ಕೋಡಿಬೈಲು, ಗಂಗಾಧರ ಸುಣ್ಣಾಜೆ, ಶ್ರೀಧರ ಗೌಡ ಕೊಯಕ್ಕುಡೆ, ಬಾಬು ಗೌಡ ಕೆಯ್ಯೂರು, ರೋಹನ್ ಶೆಟ್ಟಿ, ಸವಣೂರುಗುತ್ತು ಮತ್ತಿತರರು ಪಾಲ್ಗೊಂಡಿದ್ದರು.