ಸವಣೂರು : ಸಾರ್ವಜನಿಕ ಗಣೇಶೋತ್ಸವ ಸಮಿತಿ ಸವಣೂರು ಇದರ ವತಿಯಿಂದ ನಡೆಯುವ 36ನೇ ಸಾರ್ವಜನಿಕ ಗಣೇಶೋತ್ಸವದ ಪೂರ್ವ ಭಾವಿ ಸಭೆ ವಿನಾಯಕ ಸಭಾಭವನದಲ್ಲಿ ಆ. 1ರಂದು ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ. ಸೀತಾರಾಮ ರೈ, ಮೂರು ದಿನಗಳ ಕಾಲ ನಡೆಯುವ ಗಣೇಶೋತ್ಸವ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ. ಮೂರು ದಿನ ಅನ್ನ ಸಂತರ್ಪಣೆಯೊಂದಿಗೆ 2ನೇ ದಿನ ತುಳುನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಗಣೇಶೋತ್ಸವ ಸಮಿತಿ ಗೌರವ ಸಲಹೆಗಾರ ಎನ್. ಸುಂದರ ರೈ ಸವಣೂರು, ಅಧ್ಯಕ್ಷ ಶಿವರಾಮ ಗೌಡ ಮೆದು, ಕಾರ್ಯದರ್ಶಿ ಸುಧಾಕರ ರೈ ದೇವಸ್ಯ, ಉಪಾಧ್ಯಕ್ಷ ರಾಘವ ಗೌಡ, ಕೋಶಾಧಿಕಾರಿ ರಾಮಕೃಷ್ಣ ಪ್ರಭು, ಸವಣೂರು ರಬ್ಬರ್ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಾಸುದೇವ ಇಡ್ಯಾಡಿ, ಶಾರದಾಂಬಾ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಮೋಹನ್ ರೈ ಕೆರೆಕ್ಕೋಡಿ, ಅಧ್ಯಕ್ಷ ಸಂಪತ್ ಕುಮಾರ್ ಇಂದ್ರ, ತಾ.ಪಂ. ಮಾಜಿ ಸದಸ್ಯೆ ವಿಜಯ ಈಶ್ವರ ಗೌಡ ಕಾಯರ್ಗ, ಪದ್ಮಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ. ಶೆಟ್ಟಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಚಂದ್ರಶೇಖರ್ ಪಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ಒಕ್ಕೂಟದ ಅಧ್ಯಕ್ಷ ವೆಂಕಪ್ಪ ಅಡೀಲು, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಗಂಗಾಧರ ಸುಣ್ಣಾಜೆ, ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ಚಂದಪ್ಪ ಪೂಜಾರಿ, ಸಂಜೀವ ಪೂಜಾರಿ, ನಾರಾಯಣ ಕನಡ, ಸವಣೂರು ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.