ಸಿದ್ದಾಪುರ: ಸೌಡ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಫೆ. 10ರಿಂದ ಮೊದಲ್ಗೊಂಡು ಫೆ.13ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ. 12ರಂದು ವಾರ್ಷಿಕ ಕೆಂಡಸೇವೆ ಹಾಗೂ ಜಾತ್ರಾ ಮಹೋತ್ಸವ ಜರಗಲಿದೆ.
ಫೆ. 10ರಂದು ಸಂಜೆ 7ರಿಂದ ಭಜನ ಕಾರ್ಯಕ್ರಮ, ಫೆ. 11ರಂದು ಅಪರಾಹ್ನ 5 ರಿಂದ ದೇವಿಯ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶ ಸ್ಥಾಪನೆ, ಕಲಾತತ್ವ ಹೋಮ, ಅಧಿವಾಸ
ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಫೆ. 12ರಂದು ಬೆಳಗ್ಗೆ 8.30ರಿಂದ ಸಂಕ್ರಾಂತಿಯ ಅಂಗವಾಗಿ ವಿಶೇಷ ಪೂಜೆ, ಸಪ್ತಶತೀ ಪಾರಾಯಣ, ತುಲಾಭಾರ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ರಿಂದ ಮಹಾ ಪೂಜೆ, ಬೇವಿನ ಸೇವೆ, ವಾರ್ಷಿಕ ಕೆಂಡಸೇವೆ ಹಾಗೂ ಮಹಾ ಅನ್ನಸಂತರ್ಪಣೆ, ಫೆ.13ರಂದು ಬೆಳಗ್ಗೆ ವಿಶೇಷ ಪೂಜೆ ಹಾಗೂ ಹಾಲುಹಬ್ಬ ಜರಗಲಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.