ಮಹಾನಗರ: ಹಿಂದೂ ಧಾರ್ಮಿಕ ಕ್ರಿಯಾ ಸಮಿತಿ ಮರೋಳಿ ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ದುರ್ಗಾ ನಮಸ್ಕಾರ ಪೂಜೆಯು ಇತ್ತೀಚೆಗೆ ಅಡುಮರೋಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ಮಾತ ನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯ ವಾಹಕ ಪಿ. ಎಸ್. ಪ್ರಕಾಶ್, ಸಮಾಜದಲ್ಲಿ ತಾಯಂದಿರ ಕೊಡುಗೆ ಮತ್ತು ಹಿಂದೂ ಸಮಾಜವನ್ನು ಸುಭದ್ರಗೊಳಿಸುವ ಕಾರ್ಯ ತಾಯಂದಿರಿಂದ ಮಾತ್ರ ಸಾಧ್ಯ. ಪಾಂಡವ ತಾಯಿ ಕುಂತಿದೇವಿ ಹಾಗೂ ಶಿವಾಜಿಯ ತಾಯಿ ಶ್ರೀಮಾತೆ ಜೀಜಾ ಬಾೖಯ ಉದಾಹರಣೆಯನ್ನು ಕೊಟ್ಟು ಮಹಿಳಾ ಜಾಗೃತಿಯು ಈ ಸಮಯದಲ್ಲಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ| ಭರತ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ನಾಗೇಶ್ ನಟ್ಟಿಮನೆ, ಹಿಂದೂ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ರಂಜಿತ್ ಮರೋಳಿ, ದಿನೇಶ್ ಶೆಟ್ಟಿ ಮರೋಳಿ, ರಮೇಶ್ ಬಜೊjàಡಿ, ರಾಜೇಶ್ ತಾತಾವು, ರಾಜೇಶ್ ಕನಪತಗ್ಗು, ವಿನಿತ್ರಾಜ್ ಮರೋಳಿ, ವಿನಯ್ ಶೆಟ್ಟಿ ಮರೋಳಿ, ಹರೀಶ್ ಮರೋಳಿ, ಪ್ರಶಾಂತ್ ಜೋಡು ಕಟ್ಟೆ, ನವೀನ್ ಮರೋಳಿ, ಪ್ರಶಾಂತ್ ಮರೋಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ದುರ್ಗಾ ನಮಸ್ಕಾರ ಪೂಜೆಯನ್ನು ಮಾಡಿದರು. ರಂಜಿತ್ ಮರೋಳಿ ಸ್ವಾಗತಿಸಿದರು. ಜಗದೀಶ್ ಶೆಣೈ ಪ್ರಸ್ತಾವಿಸಿ, ಕಿರಣ್ ಮರೋಳಿ ವಂದಿಸಿದರು.