ಸಸಿಹಿತ್ಲು: ಸಾಹಿತ್ಯದಿಂದ ಧಾರ್ಮಿಕ ನಂಬಿಕೆಯ ಕ್ಷೇತ್ರವನ್ನು ಪರಿಚಯಿಸುವ ಮೂಲಕ ಕ್ಷೇತ್ರದ ಬಗ್ಗೆ ಮಾಹಿತಿಯನ್ನು ಪಸರಿಸಬಹುದು.ಇದು ಮುಂದಿನ ಪೀಳಿಗೆಗೆ ಕ್ಷೇತ್ರದ ಬಗ್ಗೆ ಇರುವ ನಂಬಿಕೆಯ ಪರಂಪರೆಯನ್ನು ಉಳಿಸುತ್ತದೆ ಎಂದು ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಯಾನೆ ಅಪ್ಪು ಪೂಜಾರಿ ಹೇಳಿದರು. ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದಲ್ಲಿ ಕ್ಷೇತ್ರದ ಪರಿಚಯದ ಕೃತಿಯ ಎರಡನೇ ಆವೃತ್ತಿಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.
ಆಡಳಿತ ಮಂಡಳಿಯ ಅಧ್ಯಕ್ಷ ವಾಮನ ಇಡ್ಯಾ ಅವರು ಪುಸ್ತಕದ ಸಾರಾಂಶವನ್ನು ವಿಶ್ಲೇಷಿಸಿ ಆವೃತ್ತಿಯ ಬಗ್ಗೆ ಮಾತನಾಡಿದರು. ಸಸಿಹಿತ್ಲು ಶ್ರೀ ಭಗವತೀ ತೀಯ ಸಮಾಜ ಸಂಘದ ಅಧ್ಯಕ್ಷ ಸುರೇಶ್ ಕೆ. ಬಂಗೇರ, ಕೆನರಾ ಬ್ಯಾಂಕ್ನ ಹಳೆಯಂಗಡಿ ಶಾಖಾ ಪ್ರಬಂಧಕ ಎಚ್.ಆರ್.ಪವಾರ್, ದೇಗುಲದ ಪ್ರಮುಖರಾದ ಗೋಪಾಲ ಪಾತ್ರಿ, ಶಿವಪ್ರಸಾದ್ ಅತ್ತಾರ್, ರಾಮಣ್ಣ ಮಾಸ್ತರ್, ಗಂಗಯ್ಯ ಗುರಿಕಾರ, ಭೋಜ ಗುರಿಕಾರ, ಗೋಪಾಲ ಗುರಿಕಾರ, ಸುಂದರ ಗುರಿಕಾರ, ಭಾಸ್ಕರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.