ಎದೆ, ಹಣೆ, ಕಣ್ಣು, ಮನಸ್ಸು, ಮಾತು, ಕೈಗಳು ಪದಗಳು ಮತ್ತು ಮೊಣಕಾಲುಗಳನ್ನು ನೆಲಕ್ಕೆ ತಾಗಿಸಿ ನೆಲದಲ್ಲಿ ಉದ್ದಂಡ ನಮಸ್ಕಾರ ಮಾಡುವುದಕ್ಕೆ ಸಾಷ್ಟಾಂಗ ನಮಸ್ಕಾರವೆನ್ನುತ್ತಾರೆ. ಸರ್ವ ಸಮರ್ಪಣಾ ಭಾವ ವ್ಯಕ್ತವಾಗುವುದು. ದೇವರಿಗೆ ಮತ್ತು ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ಕ್ರಮ. ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡುವುದು ಸೂಕ್ತವಲ್ಲ.
ಶುಭ ದಿನಗಳಲ್ಲಿ ಹಿರಿಯರಿಗೆ ನಮಸ್ಕರಿಸುವುದು ಪದ್ಧತಿ. ಹಿರಿಯರ ಎದುರು ಬಾಗಿ ನಮ್ಮ ಎರಡು ಕೈಗಳಿಂದ ಎರಡು ಕಿವಿಗಳನ್ನೂ ಹಿಡಿದು ಆ ನಂತರ ನಮ್ಮ ಬಲಕೈಯಿಂದ ಅವರ ಬಲಪದವನ್ನು ನಮ್ಮ ಎಡಕೈಯಿಂದ ಅವರ ಎದ ಪದವನ್ನು ಮುಟ್ಟಿ ನಮಸ್ಕಾರ ಮಾಡುವುದಕ್ಕೆ ಅಭಿವಾದನೆ ಎನ್ನುತ್ತೇವೆ.