ಸವಣೂರು: ಪುಣ್ಯಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದಲ್ಲಿ ಶ್ರೀ ಧರ್ಮ ಅರಸು ಉಳ್ಳಾಕುಲು ದೈವಗಳ ಮತ್ತು ಪರಿವಾರಗಳ ದೈವಗಳ ಧರ್ಮ ನಡಾವಳಿ ಜಾತ್ರೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. 15, 16ರಂದು ನಡೆಯಿತು.
ಫೆ. 15ರ ಬೆಳಗ್ಗೆ ಗಣಪತಿ ಹೋಮ, ಗೊನೆ ಕಡಿಯುವುದು, ದೈವಗಳ ತಂಬಿಲ, ನಾಗತಂಬಿಲ, ಬೊಟ್ಟಿ ಭೂತ ತಂಬಿಲ, ಸಂಜೆ 4 ಗಂಟೆಗೆ ನೇರೋಳ್ತಡ್ಕದಿಂದ ಸಾರಕರೆಬೀಡು ಕಲ್ಲಮಾಡದ ವರೆಗೆ ಹಸುರುವಾಣಿ ಮೆರವಣಿಗೆ, ಅನಂತರ ಶ್ರೀದುರ್ಗಾ ನಮಸ್ಕಾರ ಪೂಜೆ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ ನಡೆಯಿತು. ಸಂಜೆ 7ರಿಂದ ಶ್ರೀಧರ್ಮರಸು ಉಳ್ಳಾಕುಲು ಮತ್ತು ಪರಿವಾರ ದೈವಗಳ ಕಿರುವಾಳ ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ಬಂದಿತು. ಸುಡುಮದ್ದು ಪ್ರದರ್ಶನ ಸಾರಕರೆ ಬೆಡಿ ಪ್ರದರ್ಶನಗೊಂಡಿತು. ಅನ್ನಸಂತರ್ಪಣೆಯ ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ದೈವದ ನೇಮ ಫೆ. 16ರ ಬೆಳಗ್ಗೆ 6ರಿಂದ ಎಲ್ಯಾರ್ ಉಳ್ಳಾಕುಲು ದೈವದ ಓಲಸರಿ ನೇಮ, ಅನಂತರ ಮಲ್ಲಾರ್ ಉಳ್ಳಾಕುಲು ದೈವದ ಓಲಸರಿ ನೇಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬಳಿಕ ಮಹಿಷಂದಾಯ ದೈವದ ನೇಮ ಮತ್ತು ಕೊಡಮಣಿತ್ತಾಯ ನೇಮ, ಸಂಜೆ 7.30ಕ್ಕೆ ಗುಳಿಗ ದೈವದ ಭಂಡಾರ ತೆಗೆದು ನೇಮ ನಡೆಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ, ಪ್ರೀತಿ ಎಂ. ಶೆಟ್ಟಿ, ಶ್ರದ್ದಾ ಶೆಟ್ಟಿ, ದೇವಿಕಿರಣ್ ಶೆಟ್ಟಿ, ಧರ್ಮರಸು ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ದಿಲೀಪ್ ಹೆಗ್ಡೆ ನೇರೋಳ್ತಡ್ಕ, ಕಾರ್ಯದರ್ಶಿ ಕರುಣಾಕರ ಗೌಡ ಸಾರಕರೆ, ಮಹಿಳಾ ವಿಭಾಗದ ಅಧ್ಯಕ್ಷೆ ಲಲಿತಾ ಚಂದಪ್ಪ ಗೌಡ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.