Home ಧಾರ್ಮಿಕ ಸುದ್ದಿ ಸರಪಾಡಿ ಪುನಃಪ್ರತಿಷ್ಠೆ: ಧಾರ್ಮಿಕ ಸಭೆ

ಸರಪಾಡಿ ಪುನಃಪ್ರತಿಷ್ಠೆ: ಧಾರ್ಮಿಕ ಸಭೆ

'ಆರಾಧನ ಕೇಂದ್ರಗಳು ಸಾಮರಸ್ಯದ ತಾಣಗಳು'

1396
0
SHARE
ಧರ್ಮಗುರು ಪಿ.ಎಸ್‌. ತ್ವಾಹಾ ಸಅದಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು

ಪುಂಜಾಲಕಟ್ಟೆ: ಎಲ್ಲ ಧರ್ಮಗಳ ಆರಾಧನ ಕೇಂದ್ರಗಳು ಪ್ರೀತಿ, ಶಾಂತಿ, ಸಾಮರಸ್ಯವನ್ನು ಪಸರಿಸುವ ತಾಣಗಳಾಗಿದ್ದು, ಮಾನವೀಯತೆ ಇದರ ಮುಖ್ಯ ವಿಚಾರವಾಗಿದೆ ಎಂದು ಅಜಿಲಮೊಗರು ಹ.ಸ. ಬಾಬಾ ಫಕ್ರುದ್ದಿನ್‌ ಜುಮ್ಮಾ ಮಸೀದಿಯ ಧರ್ಮಗುರು ಪಿ.ಎಸ್‌. ತ್ವಾಹಾ ಸಅದಿ ಅವರು ಹೇಳಿದರು.

ಸರಪಾಡಿ ವೆಂಕಟರಮಣ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಮತ್ತು ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ನಡೆಯುತ್ತಿರುವ ಶ್ರೀ ವೆಂಕಟರಮಣ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸರ್ವ ಧರ್ಮದವರು ಪರಸ್ಪರ ಪ್ರೀತಿ, ಸಹಬಾಳ್ವೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ಸರಪಾಡಿ, ಮಠದಬೆಟ್ಟು ಶ್ರೀ ಮಹಾಮ್ಮಾಯಿ ಮಂದಿರದ ಆನುವಂಶಿಕ ಮೊಕ್ತೇಸರ ರುಕ್ಮಯ ನಾಯಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಗುರು ಪಿ.ಎಸ್‌. ತ್ವಾಹಾ ಸಅದಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಂಬಯಿ ಮೀರಾ ಬಾಯಂದರ್‌ ಬಿಜೆಪಿ ಕ್ಷೇತ್ರದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಮುಖ್ಯ ಅತಿಥಿಯಾಗಿ ಮಾತನಾಡಿ, ದೈವ, ದೇವಸ್ಥಾನಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಯಿಂದ ಒಗ್ಗಟ್ಟು ಉಂಟಾಗುವುದು ಎಂದರು.

ಉದ್ಯಮಿ ಮೋಹನ್‌ ಪೈ ಮಾಣಿ, ‘ದೇವಸ್ಥಾನಗಳ ಅಭಿವೃದ್ಧಿಗೆ ನಮ್ಮ ಸ್ವಲ್ಪ ಪಾಲು ಮೀಸಲಿರಲಿ’ ಎಂದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಂಚಾಲಕ ರವೀಂದ್ರ ಟಿ.ಸಿ., ದಂತ ವೈದ್ಯ ಡಾ| ಬಾಲಚಂದ್ರ ಶೆಟ್ಟಿ, ಸರಪಾಡಿ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದಯಾನಂದ ಶೆಟ್ಟಿ ಮುನ್ನಲಾಯಿ, ಅಲ್ಲಿಪಾದೆ ಶ್ರೀರಾಮ ಭಜನ ಮಂದಿರದ ಅಧ್ಯಕ್ಷ ಶ್ರೀನಿವಾಸ ಮೇಸ್ತ್ರಿ, ಸಿವಿಲ್‌ ಎಂಜಿನಿಯರ್‌ ಸಂದೀಪ್‌ ಬಿ. ಆಚಾರ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಎಚ್‌. ಶಂಕರನಾರಾಯಣ ರಾವ್‌, ಗೌರವಾಧ್ಯಕ್ಷ ನರಸಿಂಹ ಐತಾಳ್‌, ಅಧ್ಯಕ್ಷ ದಯಾನಂದ ಐತಾಳ್‌, ಕಾರ್ಯದರ್ಶಿ ಪದ್ಮಪ್ಪ ಪೂಜಾರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿ ಉಪಾಧ್ಯಕ್ಷ ಎನ್‌. ಧನಂಜಯ ಶೆಟ್ಟಿ ಸರಪಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಸದಸ್ಯ ದಿನೇಶ್‌ ಗೌಡ ವಂದಿಸಿದರು. ಸಂತೋಷ್‌ ಸಿದ್ದಕಟ್ಟೆ ನಿರೂಪಿಸಿದರು.

ಇಂದು ಬ್ರಹ್ಮ ಕಲಶ
ಸೋಮವಾರ ಬೆಳಗ್ಗೆ 7ಕ್ಕೆ ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಧಾರ್ಮಿಕ ಸಭೆ ನಡೆಯಲಿದ್ದು, ಸಚಿವ ಬಿ. ರಮಾನಾಥ ರೈ, ಮೂಡಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ| ಮೋಹನ ಆಳ್ವ, ಅಲ್ಲಿಪಾದೆ ಚರ್ಚ್‌ ಧರ್ಮಗುರು ಫಾ| ಗ್ರೆಗೊರಿ ಪಿರೇರ ಮತ್ತಿತರ ಗಣ್ಯರು ಭಾಗವಹಿಸಲಿರುವರು. ರಾತ್ರಿ ರಂಗಪೂಜೆ, ಬಳಿಕ ಸುಂಕದಕಟ್ಟೆ ಮೇಳದವರಿಂದ ‘ಶ್ರೀದೇವಿ ಮಹಾಮಹಾತ್ಮೆ ಬಯಲಾಟ ನಡೆಯಲಿದೆ.

ಪುಣ್ಯಫ‌ಲ
ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಭಾಗಿಯಾಗುವುದು ಪುಣ್ಯ ಫಲ. ಭಗವಂತನ ನಿತ್ಯ ಆರಾಧನೆಯಿಂದ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದು.
-ರುಕ್ಮಯ ನಾಯಕ್‌
ಸರಪಾಡಿ, ಮಠದಬೆಟ್ಟು
ಶ್ರೀ ಮಹಾಮ್ಮಾಯಿ ಮಂದಿರದ
ಆನುವಂಶಿಕ ಮೊಕ್ತೇಸರ

LEAVE A REPLY

Please enter your comment!
Please enter your name here