Home ಧಾರ್ಮಿಕ ಸುದ್ದಿ ಸರಪಾಡಿ: ಬಾಲಾಲಯ ಪ್ರತಿಷ್ಠೆಗೆ ಶಿಲಾನ್ಯಾಸ

ಸರಪಾಡಿ: ಬಾಲಾಲಯ ಪ್ರತಿಷ್ಠೆಗೆ ಶಿಲಾನ್ಯಾಸ

1057
0
SHARE

ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಹಿನ್ನೆಲೆ ಯಲ್ಲಿ ಬಾಲಾಲಯ ಪ್ರತಿಷ್ಠೆಗೆ ಶಿಲಾನ್ಯಾಸ ಸಮಾರಂಭ ಗುರುವಾರ ಕ್ಷೇತ್ರದ ಅಂಗಣ ದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿತು.

ಪುರೋಹಿತ ವಿಜಯಕೃಷ್ಣ ಐತಾಳ್‌ ಪುಂಜೂರು ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಪುರೋಹಿತ ಗಣಪತಿ ಐತಾಳ್‌ ಮಾರ್ಗದರ್ಶನ ನೀಡಿ, ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಶೀಘ್ರದಲ್ಲಿ ನಡೆದು ಸಂಪತ್ತು ಕ್ರೋಡೀಕರಣಗೊಂಡು ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುವಂತಾಗಲಿ. ಈ ಕಾರ್ಯದಲ್ಲಿ ಎಲ್ಲರೂ ಜತೆಯಾಗಿ ಭಾಗವಹಿಸಿ ಊರಿಗೆ ಬರುವ ದುರಿತಗಳು ಕೂಡ ನಿವಾರಣೆಯಾಗಲಿ ಎಂದು ಹಾರೈಸಿದರು.

ಬಾಲಾಲಯ ನಿರ್ಮಿಸಲಿರುವ ಹರೀಶ್‌ ಹಂಚಿಕಟ್ಟೆ ಹಾಗೂ ಹರೀಶ್‌ ಮಠದಬೆಟ್ಟು ಅವರಿಗೆ ಜೀರ್ಣೋದ್ಧಾರ ಸಮಿತಿಯಿಂದ ಪ್ರಸಾದ ನೀಡಲಾಯಿತು. ಕ್ಷೇತ್ರದ ಮೊಕ್ತೇಸರರಾದ ಚಂದ್ರಹಾಸ ಶೆಟ್ಟಿ ಎಚ್‌., ಕೊರಗಪ್ಪ ಗೌಡ, ವಿಟuಲ್‌ ಎಂ., ಉಮೇಶ್‌ ಆಳ್ವ, ದಯಾನಂದ ಕೋಡಿ, ಗಿರಿಧರ್‌ ಎಸ್‌., ಸುರೇಂದ್ರ ಪೈ, ಜೀರ್ಣೋದ್ಧಾರ ಸಮಿತಿಯ ಕುಸುಮಾಕರ ಶೆಟ್ಟಿ, ಪುರುಷೋತ್ತಮ ಪೂಜಾರಿ, ಧನಂಜಯ ಶೆಟ್ಟಿ ನಾಡಬೆಟ್ಟು, ರಾಧಾಕೃಷ್ಣ ರೈ ಕೊಟ್ಟುಂಜ, ರಾಮಣ್ಣ ಶೆಟ್ಟಿ ಕಲ್ಕೊಟ್ಟೆ, ಶಶಿಕಾಂತ ಶೆಟ್ಟಿ ಆರುಮುಡಿ, ಶಿವರಾಮ ಶೆಟ್ಟಿ ದೋಟ, ಶಿವರಾಮ ಭಂಡಾರಿ, ಆನಂದ ಶೆಟ್ಟಿ ಆರುಮುಡಿ, ಎಸ್‌.ಪಿ. ಸರಪಾಡಿ, ಸಂತೋಷ್‌ ಶೆಟ್ಟಿ, ಚೇತನ್‌ ಬಜ, ರಾಹುಲ್‌ ಕೋಟ್ಯಾನ್‌, ಸುಂದರ ಬಾಚಕೆರೆ, ಚಿನ್ನಯ ನಾಯ್ಕ…, ರಾಧಾಕೃಷ್ಣ ಶೆಟ್ಟಿ ಕಲ್ಕೊಟ್ಟೆ, ಕಿಶನ್‌ ಸರಪಾಡಿ, ಯೋಗೀಶ್‌ ಎಲ್‌., ಯೋಗೀಶ್‌ ಗೌಡ, ಪರಮೇಶ್ವರ ದೇವಾಡಿಗ, ಆನಂದ ದೇವಾಡಿಗ, ನವೀನ್‌ ದೇವಾಡಿಗ, ಜಗದೀಶ್‌ ಕೋಡಿ, ವಸಂತ ದರ್ಖಾಸು, ಬಾಬು ಪೂಜಾರಿ, ವ್ಯವಸ್ಥಾಪಕ ಗಿರೀಶ್‌ ನಾಯ್ಕ ಮೊದಲಾದವರಿದ್ದರು.

ಎ. 19: ಪ್ರತಿಷ್ಠೆ
ವಾಸ್ತುಶಿಲ್ಪಿ ಮಹೇಶ್‌ ಮುನಿಯಂಗಳ ನಿರ್ದೇಶನದಲ್ಲಿ ಬಾಲಾಲಯ ನಿರ್ಮಾಣ ಗೊಂಡು ಎ. 19ರಂದು ಶ್ರೀ ಶರಭೇಶ್ವರ, ಪರಿವಾರ ದೇವರ ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ಬಳಿಕ ಜೀರ್ಣೋದ್ಧಾರ ಸಮಿತಿ ಸಂಚಾಲಕ ಡಾ| ಎಂ. ಮೋಹನ್‌ ಆಳ್ವ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಮಾಣಿ, ಅಧ್ಯಕ್ಷ ಎಂ.ಎಸ್‌. ಶೆಟ್ಟಿ ಸರಪಾಡಿ, ಪದಾಧಿಕಾರಿಗಳ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿವೆ.

LEAVE A REPLY

Please enter your comment!
Please enter your name here