ಪುಂಜಾಲಕಟ್ಟೆ : ಬಂಟ್ವಾಳ ತಾ| ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯಲ್ಲಿ ಗುರುವಾರ ಮಹಾರಥೋತ್ಸವ ನಡೆಯಿತು.
ಗುರುವಾರ ಬೆಳಗ್ಗೆ ಪುಣ್ಯಾಹ ಕಲಶಾ ಭಿಷೇಕ, ಮಹಾಪೂಜೆ, ಉತ್ಸವ, ವಿಶೇಷ ಚೆಂಡೆವಾದನ ಬಲಿ ಜರಗಿ ಮಧ್ಯಾಹ್ನ ಶ್ರೀ ಮನ್ಮಹಾರಥಾರೋಹಣ ನಡೆಯಿತು.
ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಶಾಂತಿಗುಡ್ಡೆ ಧರ್ಮದೈವ ಶ್ರೀ ರಕ್ತೇಶ್ವರೀ ನೇಮ ಜರಗಿ ವಲಸರಿ ಇಳಿದು ಮಹಾರಥೋತ್ಸವ ನಡೆಯಿತು.
ಇಂದು ತುಲಾಭಾರ
ಮಾ. 22ರಂದು ಬೆಳಗ್ಗೆ ಕವಾಟೋ ದ್ಘಾಟನೆ, ದೇವರ ದಿವ್ಯ ದರ್ಶನ, ತುಲಾಭಾರ ಸೇವೆ, ಚೂರ್ಣೋತ್ಸವ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಕೋಡಿ ಕಲ್ಲುರ್ಟಿ ದೈವದ ಭಂಡಾರ ಬರುವುದು, ರಾತ್ರಿ ನೇಮ, ಓಕುಳಿ, ದೇವರ ಬಲಿ ಉತ್ಸವ, ಅವಭೃಥ ಸ್ನಾನ, ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮಹಾಪೂಜೆ, ಧ್ವಜಾ ವರೋಹಣ ನಡೆಯಲಿದೆ.