Home ಧಾರ್ಮಿಕ ಸುದ್ದಿ ಸಂಕಷ್ಟ ಹರ ಚತುರ್ಥಿ: ಹರಿದು ಬಂದ ಭಕ್ತರು

ಸಂಕಷ್ಟ ಹರ ಚತುರ್ಥಿ: ಹರಿದು ಬಂದ ಭಕ್ತರು

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ

767
0
SHARE

ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿ ಹಾಗೂ ಸಹಸ್ರ ನಾಳಿಕೇರ ಗಣಯಾಗವು ಜು.31 ರಂದು ಸಂಭ್ರಮದಿಂದ ಜರಗಿತು.

ಮುಂಜಾನೆಯಿಂದಲೇ ಸುಮಾರು ಮೂವತ್ತೈದು ಸಾವಿರಕ್ಕೂ ಅಧಿಕ ಭಕ್ತರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಸುಮಾರು ನಾಲ್ಕೂವರೆ ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ತಿಳಿಸಿದ್ದಾರೆ. ಪರ್ಯಾಯ ಅರ್ಚಕ ಕೆ. ಸೂರ್ಯ ನಾರಾಯಣ ಉಪಾಧ್ಯಾಯ ಸಹೋದರರು ಸಿಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here