Home ಧಾರ್ಮಿಕ ಸುದ್ದಿ ಯುವ ಬ್ರಿಗೇಡ್‌ನಿಂದ ಶಿಥಿಲಾವಸ್ಥೆಯಲ್ಲಿರುವ ದೇಗುಲದ ಶುಚಿತ್ವ

ಯುವ ಬ್ರಿಗೇಡ್‌ನಿಂದ ಶಿಥಿಲಾವಸ್ಥೆಯಲ್ಲಿರುವ ದೇಗುಲದ ಶುಚಿತ್ವ

827
0
SHARE

ಶಂಕರನಾರಾಯಣ: ಇಲ್ಲಿನ ಸೌಡ ಹಳೇ ಅಗ್ರಹಾರ ಶ್ರೀ ವೆಂಕಟರಮಣ ದೇವಸ್ಥಾನ ಶಿಥಿಲಗೊಂಡು ಮೂರೂವರೆ ದಶಕವಾಗಿದ್ದು, ಇಂದಿಗೂ ಜೀರ್ಣೋದ್ಧಾರಕ್ಕೆ ಸಕಾಲ ಕೂಡಿ ಬಂದಿಲ್ಲ. ಈ ಪುರಾತನ ಪ್ರಸಿದ್ಧ ದೇವಸ್ಥಾನವನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯಕ್ಕೆ ಯುವಾ ಬ್ರಿಗೇಡ್‌ ಮುಂದಾಗಿದೆ.

ಹಳೆ ಅಗ್ರಹಾರ ಸೌಡ ಸಾಂಬಾ ಸದಾಶಿವ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನಗಳಿಗೆ ಸುಮಾರು 800 ವರ್ಷಗಳದ ಇತಿಹಾಸವಿದೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಿಂದಲೂ ಬಲು ಪ್ರಸಿದ್ಧಿ ಪಡೆದ ಈ ಅವಳಿ ದೇವಸ್ಥಾನಗಳು ಭಕ್ತರ ಪಾಲಿಗೆ ಇಷ್ಟಾರ್ಥವನ್ನ ಸಿದ್ಧಿಸುವ ಪ್ರಸಿದ್ಧ ಧಾರ್ಮಿಕ ಸ್ಥಳಗಳಾಗಿವೆ.

1982 – 83 ರ ಭಾರೀ ಮಳೆಗೆ ವಾರಾಹಿ ನದಿಯು ಉಕ್ಕಿ ಉಂಟಾದ ನೆರೆಯಿಂದಾಗಿ ಈ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಹಾನಿಯಾಗಿತ್ತು. ಪೌಳಿಯ ಭಾಗ ಅವ್ಯವಸ್ಥೆಯಲ್ಲಿದೆ. ಪೌಳಿಯ ಮಾಡು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುತ್ತಲೂ ಗಿಡ ಗಂಟಿಗಳಿಂದ ತುಂಬಿ ಹೋಗಿದೆ.

ಮಾ. 8 : ಸ್ವಚ್ಛತೆ
ಅಜೀರ್ಣಾವಸ್ಥೆಯಲ್ಲಿರುವ ಈ ದೇವಸ್ಥಾನವನ್ನು ಮತ್ತೆ ಹಳೆಯ ಗತವೈಭವದ ಸ್ಥಿತಿಗೆ ತರುವ ಪ್ರಯತ್ನದ ಮೊದಲ ಹೆಜ್ಜೆಯಾಗಿ ಯುವಾ ಬ್ರಿಗೇಡ್‌ನ‌ ಯುವಕರು ಮಾ. 8 ರಂದು ಇಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಶ್ರಮದಾನದ ಕೆಲಸ ಆರಂಭವಾಗಲಿದೆ. ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕೂಡ ಪಾಲ್ಗೊಳ್ಳಲಿದ್ದಾರೆ.

ಪುರಾಣ ಪ್ರಸಿದ್ಧ ದೇಗುಲ
ಹಲ್ಸನಾಡು ಮನೆತನಕ್ಕೆ ಸೇರಿರುವ ದೇವಸ್ಥಾನ ಇದಾಗಿದ್ದು, ಸರಕಾರದಿಂದ ತಸ್ತೀಕ್‌ ಸಿಗುತ್ತಿದೆ. ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಸಾಂಬ ಸದಾಶಿವ ದೇವಸ್ಥಾನಗಳೆರಡು ಕೂಡ ವಾರಾಹಿ ನದಿಯ ತಟದಲ್ಲಿದೆ. 2 ಕೋಟಿ ವೆಚ್ಚದಲ್ಲಿ ಶ್ರೀ ಸಾಂಬ ಸದಾಶಿವ ದೇವಸ್ಥಾನವನ್ನು ಪುನರುತ್ಥಾನ ಮಾಡಲಾಗಿದೆ. ದೇವಸ್ಥಾನ ಹೆಬ್ಟಾಗಿಲು ಹಿಂದಿನ ವೈಭವದ ಪ್ರತೀಕವಾಗಿದೆ. ಗರ್ಭಗುಡಿ ಬಿಟ್ಟರೆ ಮತ್ತೆಲ್ಲವೂ ನಾಶವಾಗಿದೆ.

ಸುತ್ತ ಪೌಳಿ ಕುಸಿದು, ನೆಲ ಸಮವಾಗಿದೆ. ಇದೇ ಗುಡಿ ಯೊಳಗೆ ಶ್ರೀ ವೆಂಕಟರಮಣ ಶ್ರೀ ದೇವಿ ಭೂ ದೇವಿ ಸಹಿತ ವಿರಾಜಮಾನನಾಗಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಸುಂದರವಾದ ವಿಗ್ರಹ ಕೆತ್ತಲಾಗಿದೆ. ಪಂಚಲೋಹದ ಉತ್ಸವ ಮೂರ್ತಿ ಕೂಡಾ ಶ್ರೀದೇವಿ ಭೂದೇವಿ ಸಹಿತವಿದೆ. ಪ್ರಭಾವಳಿ ಕೂಡಾ ಪಂಚಲೋಹದಲ್ಲಿದೆ.

LEAVE A REPLY

Please enter your comment!
Please enter your name here