ಮಲ್ಪೆ: ಕೊಡವೂರು ಶ್ರೀ ಶಂಕರನಾರಾಯಣ ದೇವರಿಗೆ ಶಂಕರನಾರಾಯಣ ನಾಮಾವಳಿ ಸಹಿತ ಡಿ. 2ರಂದು ನಡೆಯಲಿರುವ ಏಕಾದಶ ಲಕ್ಷ ತುಳಸಿ ಬಿಲ್ವಾರ್ಚನೆಯ ಪೂರ್ವಾಭಾವಿಯಾಗಿ ರವಿವಾರ ಶ್ರೀ ದೇವರಿಗೆ ಶ್ರೀಗಂಧ-ಛಂದನ ಲೇಪನ ಹಾಗೂ ವಿಶೇಷ ಪೂಜೆಯು ನಡೆಯಿತು. ಶಂಕರನಾರಾಯಣ ಸಹಸ್ರನಾಮಾವಳಿ ಪಠಣವು ತೋನ್ಸೆ ಬ್ರಾಹ್ಮಣ ವಲಯ ಸಮಿತಿ, ಚಿಟಾಡಿ ಬ್ರಾಹ್ಮಣ ವಲಯ ಸಮಿತಿ ಮತ್ತು ಕೊಡವೂರು ಬ್ರಾಹ್ಮಣ ಮಹಾಸಭಾದ ಸಹಕಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ್ ಕೊಡವೂರು, ಅಡಿಗ ಕೃಷ್ಣಮೂರ್ತಿ ಭಟ್, ಎ. ರಾಜ ಸೇರಿಗಾರ, ಭಾಸ್ಕರ್ ಪಾಲನ್, ಬೇಬಿ ಮೆಂಡನ್, ಸೇವಾ ಸಮಿತಿಯ ಸದಸ್ಯ ಆನಂದ್ ಪಿ. ಸುವರ್ಣ, ಜನನಿ ಭಾಸ್ಕರ್ ಭಟ್, ಉಮೇಶ್ ರಾವ್, ರಾಮ ಸೇರಿಗಾರ್ ಉಪಸ್ಥಿತರಿದ್ದರು.