Home ಧಾರ್ಮಿಕ ಸುದ್ದಿ ಸಂತ ಬ್ರಿಜಿದ್‌ ದೇಗುಲ: ತೆನೆ ಹಬ್ಬ

ಸಂತ ಬ್ರಿಜಿದ್‌ ದೇಗುಲ: ತೆನೆ ಹಬ್ಬ

305
0
SHARE

ಸುಳ್ಯ : ಸುಳ್ಯ ಸಂತ ಬ್ರಿಜಿದ್‌ ದೇಗುಲದಲ್ಲಿ ಕ್ರಿಶ್ಚಿಯನ್‌ ಬಾಂಧವರು ಸಂಭ್ರಮದಿಂದ ಮೊಂತಿ ಹಬ್ಬವನ್ನು ಶನಿವಾರ ಆಚರಿಸಿದರು. ಮಾತೆ ಮರಿಯಮ್ಮನವರ ಜಯಂತಿ ಯನ್ನು ಕ್ರಿಶ್ಚಿಯನ್‌ ಬಾಂಧವರು ಮೊಂತಿ ಹಬ್ಬ ಅಥವಾ ಕೊಯಿಲು ಹಬ್ಬವಾಗಿ ಆಚರಿಸುತ್ತಿದ್ದಾರೆ. ಜ್ಯೋತಿ ವೃತ್ತದ ಬಳಿಯಲ್ಲಿ ಹೊಸ ತೆನೆಗಳ ಆಶೀರ್ವಚನ ವನ್ನು ಸಹಾಯಕ ಗುರು ವಂ| ಪೌಲ್‌ ಸೆಬೆಸ್ಟಿಯನ್‌ ಡಿ’ಸೋಜಾ ನೆರವೇರಿಸಿದರು. ವಿಚಾರಣ ಗುರುಗಳಾದ ವಂ| ಸ್ವಾಮಿ ವಿನ್ಸೆಂಟ್‌ ಡಿ’ಸೋಜಾ ಅವರು ಹಬ್ಬದ ಕುರಿತಾಗಿ ಮಾತನಾಡಿದರು.

ಮಾತೆಯನ್ನು ಹಾಗೂ ಹೊಸ ತೆನೆಯನ್ನು ಎಲ್ಲ ಚರ್ಚ್‌ ಬಾಂಧವರು ಗೀತ ಗಾಯನದ ಮೂಲಕ ಪಲ್ಲಂಗಿಯಲ್ಲಿ ಮೆರವಣಿಗೆಯ ಮೂಲಕ ದೇಗುಲಕ್ಕೆ ಕೊಂಡೊಯ್ದರು. ಪ್ರಧಾನ ಯಾಜಕರಾಗಿ ವಂ| ಸ್ವಾಮಿ ಓಸ್ವಾಲ್ಡ್‌ ಮೊಂತೆರೊ ಅವರು ಬಲಿಪೂಜೆ ನೆರವೇರಿಸಿದರು. ಮಕ್ಕಳು ಹಾಗೂ ಹಿರಿಯರು ಮಾತೆಗೆ ಹೂಗಳನ್ನು ಅರ್ಪಿಸುವುದರ ಮೂಲಕ ಗೌರವ ಸಮರ್ಪಿಸಿದರು. ಬಲಿಪೂಜೆಯ ಕೊನೆಯಲ್ಲಿ ಪ್ರತಿ ಕುಟುಂಬಗಳಿಗೆ ಹೊಸ ತೆನೆಯನ್ನು ಹಂಚಲಾಯಿತು. ಹಬ್ಬದ ಸಲುವಾಗಿ ಕಬ್ಬುಗಳನ್ನು ವಿತರಿಸಲಾಯಿತು. ದಾನಿಗಳ ನೆರವಿನಿಂದ ಚರ್ಚ್‌ ವೇದಿಕೆಯನ್ನು ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು.

LEAVE A REPLY

Please enter your comment!
Please enter your name here