Home ಧಾರ್ಮಿಕ ಸುದ್ದಿ ಕಾಷ್ಠಶಿಲ್ಪದ ಸಂಪ್ಯಾಡಿ ದೇಗುಲ: ಬ್ರಹ್ಮಕಲಶೋತ್ಸವ

ಕಾಷ್ಠಶಿಲ್ಪದ ಸಂಪ್ಯಾಡಿ ದೇಗುಲ: ಬ್ರಹ್ಮಕಲಶೋತ್ಸವ

976
0
SHARE
ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ದೇವಸ್ಥಾನ.

ಸುಬ್ರಹ್ಮಣ್ಯ: ಹೆಬ್ಟಾಗಿಲಿನಿಂದ ಹಿಡಿದು ಗರ್ಭಗುಡಿಯ ಒಳಭಾಗದ ತನಕ ಅಪರೂಪದ ಮರದ ಕೆತ್ತನೆಗಳನ್ನು ಹೊಂದಿರುವ ಬಳ್ಪದ ಸಂಪ್ಯಾಡಿ ಶ್ರೀ ಯಜ್ಞಮೂರ್ತಿ ನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಫೆ. 28ರಂದು ಚಾಲನೆ ದೊರೆತಿದ್ದು, ಮಾ. 5ರ ತನಕ ಸಂಭ್ರಮದಿಂದ ನಡೆಯಲಿದೆ.

ಆಕರ್ಷಕ ಮರದ ಕೆತ್ತನೆಗಳು ಮನ ಸೆಳೆಯುತ್ತದೆ.

ಈ ದೇಗುಲವು 700 ವರ್ಷಗಳ ಇತಿಹಾಸ ಹೊಂದಿದೆ. ದೇವಸ್ಥಾನದ ಎಲ್ಲ ಕೆಲಸ ಕಾರ್ಯಗಳನ್ನು ಊರ ಭಕ್ತರು ಶ್ರಮ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪೂರ್ಣಗೊಳಿಸಿದ್ದಾರೆ. ದೇವಸ್ಥಾನದ ಗರ್ಭಗುಡಿ ಹಾಗೂ ಒಳಾಂಗಣ ಗಮನ ಸೆಳೆಯುತ್ತಿದೆ. ವಿಶಿಷ್ಟ ಹಾಗೂ ಅಪರೂಪದ ಕಾಷ್ಠಶಿಲ್ಪಗಳು ಭಕ್ತರ ಮನಸ್ಸಿಗೆ ಖುಷಿ ನೀಡುತ್ತಿವೆ. ಎಲ್ಲ ಕೆತ್ತನೆಗಳೂ ಆಕರ್ಷಕವಾಗಿವೆ.

ದೇವಸ್ಥಾನದ ಮುಖಮಂಟಪದಲ್ಲಿ ಮರದಲ್ಲಿ ಮಾಡಿರುವ ನವಗ್ರಹ ಕೆತ್ತನೆ, ದ್ವಾದಶ ರಾಶಿಗಳ ಕೆತ್ತನೆ, ಹೆಬ್ಟಾಗಿಲಿನಲ್ಲಿ ಅಷ್ಟಲಕ್ಷ್ಮಿಯರ ಕೆತ್ತನೆ ಗಮನ ಸೆಳೆದರೆ ಗರ್ಭಗುಡಿಯ ಸುತ್ತಲೂ ಮರದ ಕೆತ್ತನೆ ಆಕರ್ಷಕವಾಗಿದೆ. ಗರ್ಭಗುಡಿಯ ಸುತ್ತದಶಾವತಾರದ ಕೆತ್ತನೆ, ಮುಖ್ಯಪ್ರಾಣ ದೇವರ ಮುಂದೆ ಎರಡು ಮರದ ಕೆತ್ತನೆ ಅತ್ಯಂತ ಸುಂದರವಾಗಿದೆ.

ಒಂದು ಧನ್ಯತಾ ಭಂಗಿಯಲ್ಲಿದ್ದರೆ ಇನ್ನೊಂದು ಗದೆ ಹಿಡಿದು ಅಭಯ ನೀಡುವ ಭಂಗಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಜತೆಗೆ ಕರ್ಣ ಮುಚ್ಚಿಗೆ ಅತ್ಯಂತ ವಿಶಿಷ್ಟವಾಗಿದೆ. ಶಿಲೆಕಲ್ಲು , ತಾಮ್ರದ ಹೊದಿಕೆಯನ್ನೂ ಮಾಡಲಾಗಿದೆ.

ಇದೆಲ್ಲ ಮರದ ಕೆತ್ತನೆಗಳನ್ನು ಕೊಕ್ಕಡದ ಶಿಲ್ಪಿ ಸುಬ್ರಹ್ಮಣ್ಯ ಆಚಾರ್ಯ ತಮ್ಮ ತಂಡದೊಂದಿಗೆ ಒಂದೂವರೆ ವರ್ಷ ಶ್ರಮಿಸಿ, ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here