Home ಧಾರ್ಮಿಕ ಸುದ್ದಿ ಸಮಷ್ಟಿಯ ಹಿತಕ್ಕಾಗಿ ಅತಿರಾತ್ರ ಸೋಮಯಾಗ : ಕೊಂಡೆವೂರು ಶ್ರೀ

ಸಮಷ್ಟಿಯ ಹಿತಕ್ಕಾಗಿ ಅತಿರಾತ್ರ ಸೋಮಯಾಗ : ಕೊಂಡೆವೂರು ಶ್ರೀ

1254
0
SHARE

ಕಾಸರಗೋಡು: ಜಗತ್ತಿನ ಹಿತಕ್ಕಾಗಿ ಯಾಗ, ಯಜ್ಞ ಮಾಡಿದ ಪುಣ್ಯ ಭೂಮಿ ಭಾರತ. ಇಂತಹಾ ಪುಣ್ಯ ಭೂಮಿಯಲ್ಲಿ ಸರ್ವರ ಸುಖಕ್ಕಾಗಿ, ಸಮಷ್ಟಿಯ ಹಿತಕ್ಕಾಗಿ ವಿಶ್ವಜಿತ್‌ ಅತಿರಾತ್ರ ಸೋಮಯಾಗ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯಲಿದ್ದು, ಸಕಲ ಸಿದ್ಧತೆಗಳಾಗುತ್ತಿದೆ ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಕಾಸರಗೋಡು ನಗರ ಮಧ್ಯದ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ವಿಷ್ಣು ಸಹಸ್ರನಾಮ ಅಭಿಯಾನದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಸೋಮಯಾಗದಂತಹಾ ಯಾಗ ಈ ಪ್ರದೇಶದಲ್ಲಿ ಸಿಂದೆ ನಡೆದಿಲ್ಲ. ಇದರಲ್ಲಿ ಭಾಗವಹಿಸುವುದೇ ಮಹಾಯೋಗ. ಭಗವಂತನ ಕರುಣೆಯ ಬೆಳಕು ಎಲ್ಲರಿಗೂ ಲಭಿಸಲಿ ಎಂದು ಶ್ರೀಗಳು ಹಾರೈಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದು, ಅನುಗ್ರಹ ಭಾಷಣ ಮಾಡಿದರು. ಲೋಕ ಕಲ್ಯಾಣಾರ್ಥವಾಗಿ ಯಾಗಗಳನ್ನುನಡೆಸಿದ ಪುಣ್ಯ ಭೂಮಿ ಕೊಂಡೆವೂರು ಯಾಗಭೂಮಿಯಾಗಿದೆ ಎಂದು ಉಳಿಯತ್ತಾಯರು ಹೇಳಿದರು.

ಅರ್ಚಕ ಹರಿನಾರಾಯಣ ಮಯ್ಯ ಅವರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಪಠನ ನಡೆಯಿತು. ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಮ ಪ್ರಸಾದ್‌ ಕಾಸರಗೋಡು, ಎ.ಟಿ.ನಾೖಕ್‌, ನಾರಾಯಣ, ಜಯಾನಂದ ಕುಮಾರ್‌ ಹೊಸದುರ್ಗ, ಗಣಪತಿ ಕೋಟೆಕಣಿ, ಗುರುಪ್ರಸಾದ್‌ ರಥ ಯಾತ್ರೆಯನ್ನು ಸ್ವಾಗತಿಸಿದರು. ರಾಮಕೃಷ್ಣ ಹೊಳ್ಳ ಸ್ವಾಗತ ಭಾಷಣ ಮಾಡಿದರು.

LEAVE A REPLY

Please enter your comment!
Please enter your name here