Home ಧಾರ್ಮಿಕ ಸುದ್ದಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ

ಸುತ್ತುಪೌಳಿ ತಾಮ್ರದ ಹೊದಿಕೆ ಅಳವಡಿಕೆಗೆ ಚಾಲನೆ

1999
0
SHARE

ಕೋಟ: ಸಾಲಿಗ್ರಾಮ ಗುರುನರಸಿಂಹ ದೇಗುಲದ ಸುತ್ತುಪೌಳಿಗೆ ಸುಮಾರು 60ಲಕ್ಷ ವೆಚ್ಚದಲ್ಲಿ ತಾಮ್ರದ ಹೊಡಿಕೆ ಅಳವಡಿಸಲು ನಿರ್ಧರಿಸಿದ್ದು ಇದಕ್ಕೆ ಚಾಲನೆ ಕಾರ್ಯಕ್ರಮ ಫೆ. 17ರಂದು ನೆರವೇರಿತು.

ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ ಅವರು ಗುರುನರಸಿಂಹ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತಾಮ್ರದ ಹೊಡಿಕೆಗೆ ಸಂಪೂರ್ಣ ತಾಮ್ರವನ್ನು ನೀಡಿದ ಯಜ್ಞನಾರಾಯಣ ಹೇರ್ಲೆ ಹಾಗೂ ರಘುನಾಥ ಸೋಮಯಾಜಿ ಹಾಗೂ ಕಾಮಗಾರಿಯ ಕೆಲಸದ ಸಂಪೂರ್ಣ ಮಜೂರಿಯನ್ನು ನೀಡುವ ಭರವಸೆ ನೀಡಿದ ಶಾಲಿನಿ ಶ್ರೀಧರ ಮಯ್ಯಬೆಂಗಳೂರು ಹಾಗೂ ದಾನಿಗಳಾದ ರಾಮಚಂದ್ರ ಉಡುಪ ವಾಸು ಹೊಟೇಲ್‌ ಕನಕಪುರ, ನಾರಾಯಣ ಐತಾಳ, ಸಾಲಿಗ್ರಾಮ ಪ.ಪಂ.ಅಧ್ಯಕ್ಷೆ ರತ್ನಾ ನಾಗರಾಜ್‌ ಗಾಣಿಗ, ಮುಖ್ಯಾಧಿಕಾರಿ ಶ್ರೀಪಾದ್‌ ಪುರೋಹಿತ್‌, ಆಡಳಿತ ಮಂಡಳಿಯ ಖಜಾಂಚಿ ಪ್ರಸನ್ನ ತುಂಗ, ಸದಸ್ಯರಾದ ಸದಾರಾಮ ಹೇರ್ಲೆ, ಚಂದ್ರಶೇಖರ್‌ ಸೋಮಯಾಜಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here