Home ಧಾರ್ಮಿಕ ಸುದ್ದಿ ಸಾಲಿಗ್ರಾಮ ಗುರುನರಸಿಂಹ ದೇಗುಲ: ನರಸಿಂಹ ಹೋಮ ಸಂಪನ್ನ

ಸಾಲಿಗ್ರಾಮ ಗುರುನರಸಿಂಹ ದೇಗುಲ: ನರಸಿಂಹ ಹೋಮ ಸಂಪನ್ನ

567
0
SHARE

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಶಾಕಲ ಋಕ್‌ ಸಂಹಿತಾ ಪಾರಾಯಣ ಮತ್ತು ನರಸಿಂಹ ಹೋಮ ಜು.15ರಂದು ಆರಂಭಗೊಂಡಿದ್ದು, ಜು.22ರಂದು ಸಂಪನ್ನಗೊಂಡಿತು.

ಈ ಪ್ರಯುಕ್ತ ನಿತ್ಯವೂ ಋಕ್‌ ಸಂಹಿತಾ ಪಾರಾಯಣ ಮತ್ತು ಮಹಾಭಿಷೇಕ, ವಿಪ್ರ ಮಹಿಳೆಯರಿಂದ ವಿಷ್ಣು ಸಹಸ್ರನಾಮ ಪಠಣ, ಮಹಾಪೂಜೆ ಜರಗಿತು. ನಡೆಯಿತು ಹಾಗೂ ಜು.22ರಂದು 1008 ನರಸಿಂಹ ಹೋಮ ಜರಗಿತು.

ವೇ|ಮೂ| ಜನಾರ್ದನ ಅಡಿಗ, ಮಂಜುನಾಥ ಉಪಾಧ್ಯ ಧಾರ್ಮಿಕ ಕಾರ್ಯಕ್ರಮ ನೇತೃತ್ವ ವಹಿಸಿದ್ದರು ಮತ್ತು ಹಲವು ಪುರೋಹಿತರು ಸೇವಾ ರೂಪದಲ್ಲಿ ಸೇವೆ ಸಲ್ಲಿಸಿದರು.
ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಅನಂತಪದ್ಮನಾಭ ಐತಾಳ , ಖಜಾಂಚಿ ಪ್ರಸನ್ನ ತುಂಗ, ರಘುನಾಥ ಸೋಮಯಾಜಿ, ಸದಾರಮ ಹೇರ್ಳೆ, ಸುಬ್ರಹ್ಮಣ್ಯ ಹೇರ್ಳೆ ಮೊದಲಾದವರು ಉಪಸ್ಥಿತರಿದ್ದರು. ನೂರಾರು ಮಂದಿ ಭಕ್ತಾಧಿಗಳು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

LEAVE A REPLY

Please enter your comment!
Please enter your name here